Cinema News
ರಕ್ಷಿತ್ ಶೆಟ್ಟಿಗೆ ಕನ್ನಡದ ಅಮೀರ್ ಖಾನ್ ಎಂದು ಬಿರುದು ಕೊಟ್ಟ ನಟ ಜಗ್ಗೇಶ್
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರೋ 777 ಚಾರ್ಲಿ ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಸಂಬಂಧ ಪ್ರೇಕ್ಷಕರಿಗೆ ಇಷ್ಟವಾಗಿದ್ದು ನಟ, ನಟಿಯರುಕೂಡ ಚಾರ್ಲಿಯನ್ನ ಮೆಚ್ಚಿಕೊಂಡಿದ್ದಾರೆ.
‘777 ಚಾರ್ಲಿ ಸಿನಿಮಾವನ್ನು ಸಿ ಎಂ ಬಸವರಾಜ ಬೊಮ್ಮಾಯಿ ನೋಡಿ ಕಣ್ಣೀರು ಹಾಕಿದ್ದರು. ಇದೇ ವೇಳೆ ಸಿಎಂ ಜೊತೆ ಸಿನಿಮಾ ನೋಡಿದ ನವರಸ ನಾಯಕ ಜಗ್ಗೇಶ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು, ರಕ್ಷಿತ್ ಶೆಟ್ಟಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿಯ ಬಾಂಧವ್ಯ ಸಿನಿಮಾದಲ್ಲಿ ಭಾವನಾತ್ಮಕವಾಗಿ ಹಿಡಿದಿಟ್ಟಿದ್ದು, ರಕ್ಷಿತ್ ಹಾಗೂ ಚಾರ್ಲಿ ಜುಗಲ್ಬಂಧಿಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ನಟ ಜಗ್ಗೇಶ್ ಕೂಡ ಶ್ವಾನ ಪ್ರಿಯರಾಗಿದ್ದ, ಈ ಕಾರಣಕ್ಕೆ ನವರಸ ನಾಯಕನಿಗೂ ಈ ಸಿನಿಮಾ ತುಂಬಾನೇ ಇಷ್ಟ ಆಗಿದೆ. ಸಿನಿಮಾ ನೋಡಿದ ಜಗ್ಗೇಶ್ ರಕ್ಷಿತ್ ಶೆಟ್ಟಿಗೆ ಕನ್ನಡದ ಆಮಿರ್ ಖಾನ್ ಎಂದು ಬಿರುದು ಕೊಟ್ಟಿದ್ದಾರೆ. ” ನಾನು ಒಂದೇ ಒಂದು ಮಾತು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನಮ್ಮ ರಕ್ಷಿತ್ ಶೆಟ್ಟಿ ಕನ್ನಡದ ಆಮಿರ್ ಖಾನ್.” ಎಂದು ಸಿನಿಮಾ ನೋಡಿದ ಬಳಿಕ ಹೇಳಿದ್ದಾರೆ.
“ರಕ್ಷಿತ್ ಶೆಟ್ಟಿ ಒಂದು ಅದ್ಭುತವಾದ ಪ್ರಯೋಗವನ್ನು ಈ ಸಿನಿಮಾದಲ್ಲಿ ಮಾಡಿದ್ದಾನೆ. ಬಹುಶ: ಯಾರದ್ದೇ ಕಲ್ಲು ಹೃದಯವೂ ಕೂಡ ಈ ಚಿತ್ರ ನೋಡಿದರೆ ಕರಗಿ ಹೋಗುತ್ತಾರೆ. ನಾನು ನನ್ನ ಕೆರಿಯರ್ ನಲ್ಲಿ ಎರಡು ಅನಿಮಲ್ ಸಿನಿಮಾ ನೋಡಿದ್ದೇನೆ. ಇಂದು ಇಂಗ್ಲಿಷ್. ಈ ತರ ಒಂದು ಸಿನಿಮಾ ಮಾಡಬಹುದಾ? ಅಂತ ನಾನು ನಿರೀಕ್ಷೆ ಮಾಡಿದ್ದೆ. ಅದು ಒನ್ ಅಂಡ್ ಓನ್ಲಿ ರಕ್ಷಿತ್ ಶೆಟ್ಟಿ ಮಾಡಿದ್ದಾನೆ. ಯಾರು ಪ್ರಾಣಿ ಪ್ರೇಮಿಗಳಿದ್ದಾರೋ ಅವರಿಗೆ ಈ ಚಿತ್ರ ತುಂಬಾನೇ ಕಾಡುತ್ತೆ.” ಎಂದು ಸಿನಿಮಾ ಬಗ್ಗೆ ಮಾತಾಡಿದ್ದಾರೆ.