Cinema News

‘ರಾಬರ್ಟ್‌’ನಲ್ಲಿ ಜಗಪತಿ ಬಾಬು ಅವರ ಪಾತ್ರವೇನು?

Published

on

ಮಂಗಳವಾರದಿಂದ ಶೂಟಿಂಗ್‌ ಆರಂಭಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ‘ರಾಬರ್ಟ್‌’ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಜಗಪತಿಬಾಬು ನಟಿಸಲು ಒಪ್ಪಿಕೊಂಡಿದ್ದಾರೆ.

 

ಬಚ್ಚನ್‌, ಜಾಗ್ವಾರ್‌ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿರುವ ನಟ ಜಗಪತಿ ಬಾಬು ತೆಲುಗು ಮತ್ತು ತಮಿಳಿನಲ್ಲಿ ಬಿಝಿ ನಟರಾಗಿದ್ದಾರೆ. ಈಗ ದರ್ಶನ್‌ ನಟನೆಯ ‘ರಾಬರ್ಟ್‌’ನಲ್ಲಿಯೂ ಅವರು ನಟಿಸುತ್ತಿದ್ದಾರೆ.

 

ಈ ಚಿತ್ರದಲ್ಲಿ ಅವರು ನಾಯಕ ನಟ ದರ್ಶನ್ ಅವರಿಗೆ ಟಕ್ಕರ್ ಕೊಡುವ ಖಡಕ್ ವಿಲ್ಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಜಗಪತಿ ಬಾಬು ಮತ್ತು ದರ್ಶನ್‌ ಕಾಂಬಿನೇಶನ್‌ನ ದೃಶ್ಯಗಳ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕ ತರುಣ್‌ ಸುಧೀರ್‌.

 

ಒಟ್ಟಿನಲ್ಲಿ ದಿನೇ ದಿನೇ ರಾಬರ್ಟ್‌ ಸಿನಿಮಾ ಟೀಮ್‌ ರಂಗೇರುತ್ತಿದೆ. ಸಿನಿಮಾ ಮೇಲಿನ ಕುತೂಹಲ ಹೆಚ್ಚಾಗುತ್ತಲೇ ಇದೆ.

Spread the love
Click to comment

Copyright © 2019 PopcornKannada.com