Cinema News

ನಟನಾ ವೃತ್ತಿಗೆ ಗುಡ್ ಬಾಯ್ ಹೇಳ್ತಾರಾ ಬಹುಭಾಷಾ ನಟ ನಾಸಿರ್?

Published

on

ತಮ್ಮ ಅಮೋಘ ಅಭಿನಯದ ಮೂಲಕ ಬಹುಭಾಷೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರೋ ನಟ ನಾಸಿರ್. ಪೋಷಕ ಪಾತ್ರಗಳಲ್ಲಿ ಮಿಂಚಿದ ನಾಸಿರ್ ಇದೀಗ ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳೋಕೆ ಮುಂದಾಗಿದ್ದಾರೆ.
ಸುಮಾರು ಐದು ದಶಕಗಳಿಂದ ಪೋಷಕ ಪಾತ್ರಗಳಿಂದ ಹಿಡಿದ ಖಳನಾಯಕನವರೆಗೂ ವಿಶಿಷ್ಟ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದ ನಟ ನಾಸಿರ್. ಇಂದಿಗೂ ನಾಸಿರ್ ಗೆ ಕೈ ತುಂಬಾ ಅವಕಾಶಗಳಿಗೆ. ಆದರೂ ಸಿನಿ ರಂಗಕ್ಕೆ ಗುಡ್ ಬಾಯ್ ಹೇಳೋಕೆ ನಾಸಿರ್ ಮುಂದಾಗಿದ್ದಾರೆ ಎನ್ನಲಾಗ್ತಿದೆ.
ನಾಸಿರ್ ನಟನಾಗಿ ಮಾತ್ರವಲ್ಲ, ನಿರ್ದೇಶಕ, ನಿರ್ಮಾಪಕ, ಗಾಯಕ, ಡಬ್ಬಿಂಗ್ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತ ಕಂಡ ಅದ್ಭುತ ಪ್ರತಿಭೆ ನಾಸಿರ್ ಇದೀಗ ನಟನೆಯಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಮಾತು ಕೇಳಿ ಬರ್ತಿವೆ.
ನಾಸಿರ್ ನಟನಾ ವೃತ್ತಿಗೆ ಗುಡ್ ಬಾಯ್ ಹೇಳುತ್ತಿರುವುದು ತಮ್ಮ ಆರೋಗ್ಯದ ಸಮಸ್ಯೆಯಿಂದ ಎಂಬ ಮಾತುಗಳು ಕೇಳಿ ಬರ್ತಿದೆ. ಕೊರೊನಾ ಸಮಯದಲ್ಲಿ ನಾಸಿರ್ ಅವರಿಗೆ ಹೃದಯದ ಸಮಸ್ಯೆ ಎದುರಾಗಿತ್ತು. ಅಲ್ಲದೆ ಇತ್ತೀಚೆಗೆ ಮಾಧ್ಯಮಗಳ ಸಂದರ್ಶನದಲ್ಲಿಯೂ ಈ ಮಾತನ್ನು ಹೇಳಿದ್ದಾರೆ. ಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ನಟನ ವೃತ್ತಿಯಿಂದ ವಿಶ್ರಾಂತಿ ಪಡೆಯಲಿದ್ದಾರಂತೆ.

Spread the love
Click to comment

Copyright © 2019 PopcornKannada.com