Movie Reviews

ಉಪ್ಪಿ- ಚಂದ್ರು ಕಾಂಬಿನೇಶನ್‌ನಲ್ಲಿ ಅರಳಿದ ಲವ್‌ ಸ್ಟೋರಿ – ವಿಮರ್ಶೆ – ರೇಟಿಂಗ್ – 2.5/5

Published

on

ಚಿತ್ರ: ಐ ಲವ್‌ ಯೂ

ನಿರ್ದೇಶಕ: ಆರ್‌ ಚಂದ್ರು

ನಿರ್ಮಾಣ: ಆರ್‌ ಚಂದ್ರು

ಸಂಗೀತ: ಕಿರಣ್‌

ತಾರಾಗಣ: ಉಪೇಂದ್ರ, ರಚಿತಾ ರಾಮ್‌, ಪಿ ಡಿ ಸತೀಶ್‌ ಚಂದ್ರ, ಸೋನುಗೌಡ

ರೇಟಿಂಗ್‌ : 2.5/5.

 

 

ಕೆಲ ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ ಉಪೇಂದ್ರ ಅವರ ಐಲವ್‌ಯೂ ಸಿನಿಮಾ ನಿರ್ದೇಶಕರು ಮತ್ತು ಉಪ್ಪಿ ಹೇಳಿದಂತೆಯೇ ಇದೆ. ಇದು ಉಪ್ಪಿ ಸ್ಟೈಲಿನ ಚಂದ್ರು ಸಿನಿಮಾ.

ಹೌದು, ಈ ಸಿನಿಮಾದಲ್ಲಿ ಉಪೇಂದ್ರ ಅವರ ಎ, ಉಪೇಂದ್ರ ಸೇರಿದಂತೆ ಸಾಕಷ್ಟು ಸಿನಿಮಾಗಳ ವಾಸನೆ ಇದೆ. ಆದರೆ ಅವಕ್ಕೆಲ್ಲ ಸೆಂಟಿಮೆಂಟ್‌ ಟಚ್‌ ಕೊಟ್ಟು ಚಂದ್ರು ಈ ಚಿತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಲವ್‌ ಬಗ್ಗೆ ಪಿಎಚ್‌ಡಿ ಮಾಡುತ್ತಿರುವ ಧಾರ್ಮಿಕ[ ರಚಿತಾ ರಾಮ್‌] ಮತ್ತು ಪ್ರೀತಿ ಅಂದರೆ ಅದೊಂದು ಮುಖವಾಡದ ಬದುಕು ಎನ್ನುವ ಸಂತೋಷ್‌ ನಡುವೆ ನಡೆಯುವ ಲವ್‌ ಸ್ಟೋರಿ, ಅದಕ್ಕೊಂದು ತಿರುವು ಈ ನಡುವೆ ಸೋನುಗೌಡ, ಆಕೆಯ ಮಗಳು ಹೀಗೆ ಪದರಗಳಲ್ಲಿ ಕಥೆ ಹೇಳಿದ್ದಾರೆ ಚಂದ್ರು.

ಲವ್‌ ಸ್ಟೋರಿ , ಕೌಟುಂಬಿಕ ವಿಷಯಗಳು ಹೀಗೆ ಸಾಕಷ್ಟು ವಿಷಯಗಳನ್ನು ಹೇಳಿ ತದನಂತರ ಕೊನೆಯಲ್ಲಿ ಒಂದು ಸಂದೇಶ ನೀಡಿ ಸಿನಿಮಾವನ್ನು ಮುಗಿಸುತ್ತಾರವರು. ಅದೇ ನು ಎಂಬುದಕ್ಕೆ ಸಿನಿಮಾವನ್ನು ನೋಡಬೇಕು.

 

ಈ ಸಿನಿಮಾ ನೋಡಿ ಹೊರ ಬಂದ ಪ್ರತಿಯೊಬ್ಬರಿಗೂ ಎಲ್ಲೋ ನೋಡಿದಂತೆ ಭಾಸವಾಗುತ್ತದೆ. ಆದರೆ ಉಪ್ಪಿಯ ಲವಲವಿಕೆಯ ನಟನೆ, ರಚಿತಾ ರಾಮ್‌ ಗ್ಲಾಮರ್‌, ಸೋನುಗೌಡ ಅವರ ನೈಜಾಭಿನಯ ಎಲ್ಲವೂ ಆ ಅಂಶವನ್ನು ಮುಚ್ಚಿ ಹಾಕುತ್ತವೆ. ರಚಿತಾ ರಾಮ್ ಅವರಿಗೆ ಈ ಚಿತ್ರದಲ್ಲಿ ಅಭಿನಯಕ್ಕೆ ಮತ್ತು ಗ್ಲಾಮಾರ್‌ಗೆ ಸಾಕಷ್ಟು ಸ್ಕೋಪ್ ಸಿಕ್ಕಿದೆ ಎನ್ನಬಹುದು.

 

ಈ ಚಿತ್ರವು ಆ ಕಡೆ ಉಪೇಂದ್ರ ಅವರ ಸಿನಿಮಾನೂ ಅಲ್ಲಾ ಈ ಕಡೆ ಆ ಚಂದ್ರು ಅವರ ಸಿನಿಮಾನೂ ಅಲ್ಲ. ಉಪ್ಪಿ ಸ್ಟೈಲ್ ಬೆರಸಲು ಹೋಗಿ ಚಂದ್ರು ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಎಂಟರ್‌ಟೇನ್‌ಮೆಂಟ್ ನ ದೊಡ್ಡ ಕೊರತೆಯಿದೆ. ತುಂಬಾ ಕಡೆ ಇಲ್ಲಾಜಿಕಲ್ ಸೀನ್ಸ್‌ಗಳು ಪ್ರೇಕ್ಷಕರಿಗೆ ಭಾಸ ಎನಿಸುತ್ತದೆ.

 

ಈ ಸಿನಿಮಾದಲ್ಲಿ ವಿವಾದವನ್ನು ಹುಟ್ಟು ಹಾಕಿದ್ದ ಹಾಡು, ವಿವಾದದಷ್ಟೇ ಹಾಟ್‌ ಆಗಿದೆ. ಮೊದಲ ಬಾರಿಗೆ ರಚಿತಾ ರಾಮ್‌ ಮತ್ತು ಉಪ್ಪಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಡನ್ನು ಬಿಟ್ಟರೆ ಇಡೀ ಸಿನಿಮಾ ಫ್ಯಾಮಿಲಿ ಕುಳಿತು ನೋಡಬಹುದು. ಕಲರ್‌ ಫುಲ್‌ ಆದ ಲೊಕೇಶನ್‌ ಇರುವ ಕಾರಣಕ್ಕಾಗೆ ಸಿನಿಮಾಟೋಗ್ರಫರ್‌ ಸುಜ್ಞಾನ್‌ ಇಷ್ಟವಾಗುತ್ತಾರೆ. ಕಿರಣ್‌ ಅವರ ಸಂಗೀತದಲ್ಲಿ ಒಂದೆರೆಡು ಹಾಡುಗಳು ಗುನುಗುವಂತಿವೆ.

 

ಉಳಿದಂತೆ ಮನೆಯಲ್ಲಿ ಧಾರಾವಾಹಿ ನೋಡೋ ಮಹಿಳೆಯರಿಗೆ ಈ ಚಿತ್ರ ಇಷ್ಟವಾಗಬಹುದು.

Spread the love
Click to comment

Copyright © 2019 PopcornKannada.com