Cinema News

ಉಪಾಧ್ಯಕ್ಷನಿಗೆ ಜೋಡಿಯಾದ ಹಿಟ್ಲರ್ ಕಲ್ಯಾಣದ ಲೀಲಾ

Published

on

ಕಿರುತೆರೆಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಹಿಟ್ಲರ್ ಕಲ್ಯಾಣದ ನಟಿ ಮಲೈಕಾ ವಸುಪಾಲ್ ಇದೀಗ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ನಟಿಯರಾದ ರಾಧಿಕಾ ಪಂಡಿತ್, ರಚಿತಾ ರಾಮ್, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಅವರಂತೆಯೇ, ಕಿರುತೆರೆಯಿಂದ ಸಿನಿಮಾರಂಗಕ್ಕೆ ಕಾಲಿಟ್ಟ ನಟಿಯರ ಸಾಲಿಗೆ ಇದೀಗ ಮಲೈಕಾ ಕೂಡ ಸೇರಿಕೊಳ್ಳಲಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲೇ ದೊಡ್ಡ ಬ್ಯಾನರ್ ಜೊತೆಗೆ ಕೆಲಸ ಮಾಡುವ ಅವಕಾಶ ಮಲೈಕಾಗೆ ಒಲಿದುಬಂದಿದೆ.
ಸ್ಯಾಂಡಲ್ವುಡ್ ಸಿನಿಮಾ ರಂಗದಲ್ಲಿ ತಮ್ಮ ಅದ್ಭುತ ನಟನೆಯಿಂದಲೇ ಗುರುತಿಸಿಕೊಂಡಿರುವ ನಟ ಚಿಕ್ಕಟ. ಹಾಸ್ಯನಟರಾಗಿ ಇದುವರೆಗೂ ಅಭಿಮಾನಿಗಳನ್ನ ರಂಜಿಸಿದ್ದ ಚಿಕ್ಕಣ್ಣ ಇದೀಗ ಹೀರೋ ಆಗಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗ್ಲೆ ಸಿನಿಮಾದ ಮುಹೂರ್ತ ನೆರವೇರಿದ್ದು ಚಿತ್ರಕ್ಕೆ ಉಪಾಧ್ಯಕ್ಷ ಎಂದು ಟೈಟಲ್ ಇಡಲಾಗಿದೆ.

 

 

 

ಈಗಾಗ್ಲೆ ರಾಬರ್ಟ್, ಹೆಬ್ಬುಲಿ, ಒಂದಲ್ಲಾ ಎರಡಲ್ಲಾ, ಮದಗಜ ದಂತಹ ಅದ್ಭುತ ಸಿನಿಮಾಗಳನ್ನ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ ಮಲೈಕಾ ವಸುಪಾಲ್ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ಬ್ಯಾನರ್ನ ಸಿನಿಮಾ ಮೂಲಕ ಮಲೈಕಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಮಲೈಕಾ ಪಾತ್ರ ಹೇಗಿರಲಿದೆ ಎಂಬುದನ್ನ ಮಾತ್ರ ಚಿತ್ರತಂಡವಾಗಲಿ ಅಥವಾ ಮಲೈಕಾ ಆಗಲಿ ಬಿಟ್ಟುಕೊಟ್ಟಿಲ್ಲ. ಸದ್ಯ ಕಿರುತೆರೆ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವ ಉದ್ದೇಶ ಮಲೈಕಾ ಅವರದ್ದು.

Spread the love

Copyright © 2019 PopcornKannada.com