Cinema News

ಡಿಸೆಂಬರ್ 24ಕ್ಕೆ ಗ್ರ್ಯಾಂಡ್ ರಿಲೀಸ್: ಡಾಲಿ ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಎಂಟ್ರಿಗೆ ಕೌಂಟ್‌ಡೌನ್!

Published

on

ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜಾ ಸಂಭ್ರಮವನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಡಿಸೆಂಬರ್ 24ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ವರ್ಷಾಂತ್ಯದಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ಭರ್ಜರಿ ಪ್ಯಾಕೇಜ್ ನೀಡುವ ಭರವಸೆಯೊಂದಿಗೆ ಸಿನಿಮಾ ಬರಲಿದೆ.

 

ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ‘ಬಡವ ರಾಸ್ಕಲ್’ ಬಳಿಕ ಡಾಲಿ ಧನಂಜಯ್ ಹಾಗೂ ನಿರ್ದೇಶಕ ಶಂಕರ್ ಗುರು ಮತ್ತೊಮ್ಮೆ ಕೈಜೋಡಿಸಿರುವುದು. 2021ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಆ ಚಿತ್ರದ ನಂತರ ಸುಮಾರು ಐದು ವರ್ಷಗಳ ಬಳಿಕ ಇದೇ ಜೋಡಿ ಮತ್ತೆ ಒಂದಾಗಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯನ್ನು ಸಿನಿಪ್ರಿಯರಲ್ಲಿ ಮೂಡಿಸಿದೆ. ಧನಂಜಯ್ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣದ ಯಶಸ್ವಿ ಪಯಣಕ್ಕೂ ‘ಬಡವ ರಾಸ್ಕಲ್’ ಪ್ರಮುಖ ಕಾರಣವಾಗಿತ್ತು.

 

 

 

 

 

ಆಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್‌ಟೇನರ್ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಧನಂಜಯ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಜೊತೆಗೆ ರಂಗಾಯಣ ರಘು, ನಾಗಭೂಷಣ, ಪೂರ್ಣಚಂದ್ರ ಮೈಸೂರು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಲೂಸ್ ಮಾದ ಯೋಗಿ ವಿಶೇಷ ಪಾತ್ರದ ಮೂಲಕ ಚಿತ್ರದ ವಿಶೇಷ ಆಕರ್ಷಣೆಯಾಗಿದ್ದಾರೆ.

 

 

 

 

 

ಐರಾ ಫಿಲ್ಮ್ಸ್ ಹಾಗೂ ರಾಯಲ್ ಸ್ಟುಡಿಯೋಸ್ ಬ್ಯಾನರ್‌ಗಳಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸಂಕಲನವನ್ನು ಅಜಯ್, ಕಲಾ ನಿರ್ದೇಶನವನ್ನು ಗುಣ ನಿರ್ವಹಿಸಿದ್ದು, ಅದ್ಧೂರಿ ಮೇಕಿಂಗ್‌ನೊಂದಿಗೆ ಡಿಸೆಂಬರ್ 24ರಂದು ‘ಅಣ್ಣ ಫ್ರಮ್ ಮೆಕ್ಸಿಕೋ’ ಪ್ರೇಕ್ಷಕರ ಮುಂದೆ ಅದ್ದೂರಿಯಾಗಿ ಅಬ್ಬರಿಸಲು ಸಜ್ಜಾಗಿದೆ.

Spread the love

Copyright © 2019 PopcornKannada.com