Cinema News

ಅಕ್ಟೋಬರ್ 2ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ‘ಪಿನಾಕ’ ಎಂಟ್ರಿ; ಬಿಡುಗಡೆ ದಿನಾಂಕ ಘೋಷಣೆ

Published

on

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ‘ಪಿನಾಕ’ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸಿರುವ ಈ ಬಿಗ್ ಬಜೆಟ್ ಸಿನಿಮಾ ಅಕ್ಟೋಬರ್ 2ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಅನಾವರಣಗೊಳಿಸಿದ ಚಿತ್ರತಂಡ, ಅಭಿಮಾನಿಗಳಿಗೆ ಡಬಲ್ ಸಂಭ್ರಮ ನೀಡಿದೆ.

 

ನೃತ್ಯ ನಿರ್ದೇಶಕರಾಗಿ ಖ್ಯಾತಿ ಪಡೆದಿರುವ ಧನಂಜಯ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಪಿನಾಕ’ ಎಂದರೆ ರಕ್ಷಕ ಎಂಬ ಅರ್ಥ ಹೊಂದಿದ್ದು, ಕಾವಲುಗಾರರ ಪರಂಪರೆ ಹಾಗೂ ಎರಡು ವಿಭಿನ್ನ ಕಾಲಘಟ್ಟಗಳನ್ನು ಜೋಡಿಸುವ ವಿಶಿಷ್ಟ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಈ ಚಿತ್ರದಲ್ಲಿ ಗಣೇಶ್ ಅವರು ಇದುವರೆಗೆ ಕಾಣಿಸದ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ಹೊಸ ಲುಕ್ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

 

 

 

 

 

 

ಚಿತ್ರದ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಭವ್ಯ ಸೆಟ್‌ಗಳು, ಉನ್ನತ ತಾಂತ್ರಿಕ ಗುಣಮಟ್ಟ ಹಾಗೂ ಅನುಭವಿ ಕಲಾವಿದರ ತಾರಾಬಳಗದೊಂದಿಗೆ ‘ಪಿನಾಕ’ ಸಿದ್ಧಗೊಂಡಿದೆ. ಮೊದಲ ಲುಕ್ ಹಾಗೂ ಹುಟ್ಟುಹಬ್ಬದ ವಿಶೇಷ ಪೋಸ್ಟರ್‌ಗೆ ದೊರೆತ ಅದ್ಭುತ ಪ್ರತಿಕ್ರಿಯೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮನರಂಜನೆ ಮತ್ತು ಭಾವನಾತ್ಮಕ ಅಂಶಗಳ ಸಮತೋಲನದಲ್ಲಿ ಸಿನಿಮಾ ರೂಪುಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.

 

ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ತಾಂತ್ರಿಕ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದ ಗಣೇಶ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ದಸರಾ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬರುತ್ತಿರುವ ‘ಪಿನಾಕ’, ಭವ್ಯ ನಿರ್ಮಾಣ ಮೌಲ್ಯಗಳು, ಹೊಸ ಕಥಾಹಂದರ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ವಿಭಿನ್ನ ಪಾತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ವಿಶೇಷ ಅನುಭವ ನೀಡುವ ಭರವಸೆಯೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

Spread the love

Copyright © 2019 PopcornKannada.com