Cinema News
‘ಜಂಟಲ್‌ಮನ್’ ಟ್ರೇಲರ್ ಸೂಪರ್ ಹಿಟ್
ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್‌ಮನ್ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಅದನ್ನು ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಟ್ರೇಲರ್ ಅನ್ನು ಚಿತ್ರರಂಗದ ಗಣ್ಯರು ಮೆಚ್ಚಿ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಂಡಿದ್ದರು.
ಈ ಬಗ್ಗೆ ಮಾತನಾಡಿರುವ ನಟ ಪ್ರಜ್ವಲ್ ಜಂಟಲ್‌ಮನ್ ನನ್ನ ಸಿನಿಮಾ ಕರಿಯರ್‌ನಲ್ಲಿ ಒಂದು ಅದ್ಭುತ ಸ್ಕ್ರಿಪ್ಟ್ ಆಗಿದೆ. ಟ್ರೇಲರ್‌ಗೆ ಜನ ನೀಡುತ್ತಿರುವ ರೆಸ್ಪಾನ್ಸ್ ಕಂಡು ನನಗೆ ಖುಷಿಯಾಗಿದೆ. ನಿರ್ದೇಶಕ ಜಡೇಶ್‌ಕುಮಾರ್ ಉತ್ತಮ ಸ್ಕ್ರಿಪ್ಟ್ ಮಾಡಿದ್ದಾರೆ. ಇಡೀ ಸಿನಿಮಾ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಗುರುದೇಶಪಾಂಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯಮನುಷ್ಯ ನಿದ್ರೆ ಮಾಡುವ ಸಮಯಕ್ಕಿಂತ ಹೆಚ್ಚಿನ ಸಮಯ ಈ ಚಿತ್ರದ ನಾಯಕ ನಿದ್ದೆ ಮಾಡುತ್ತಾನೆ. ಅದೇ ಈ ಚಿತ್ರದ ತಿರುಳು ಟಗರು ಮತ್ತು ಸಲಗ ಖ್ಯಾತಿಯ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸದ್ಯದಲ್ಲೆ ಚಿತ್ರ ರಿಲೀಸ್ ಆಗಲಿದೆ.
ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ ಬಿಡುಗಡೆಗೊಳಿಸಿದ್ದರು.