Cinema News

ಸಿಂಪಲ್ ಸುನಿ ‘ಗತವೈಭವ’ದಲ್ಲಿ ಆಶಿಕಾ ದೇವಕನ್ಯೆ…ದುಶ್ಯಂತ್ ಗೆ ಜೋಡಿಯಾದ ಚುಟುಚುಟು ಬ್ಯೂಟಿ

Published

on

ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಭತ್ತಳಿಕೆ ಬಹುನಿರೀಕ್ಷಿತ ಸಿನಿಮಾ ಗತವೈಭವ. ಈ ಸಿನಿಮಾ ಮೂಲಕ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಪುತ್ರ ದುಷ್ಯಂತ್‌ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನವಾಗಿ ದುಷ್ಯಂತ್ ಇಂಟ್ರುಡ್ಷನ್ ಟೀಸರ್ ರಿಲೀಸ್ ಮಾಡಿದ್ದ ಸುನಿ ಈಗ ನಾಯಕಿಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದ್ದಾರೆ.

 

 

 

‘ಗತವೈಭವಕ್ಕೆ’ ಆಶಿಕಾ ನಾಯಕಿ

ಗತವೈಭವಕ್ಕೆ ನಾಯಕಿ ಯಾರು ಆಗ್ತಾರೆ ಎಂಬ ಕುತೂಹಲ ಚಿತ್ರರಸಿಕರಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೀರೋ ಇಂಡ್ರುಡಕ್ಷನ್ ಟೀಸರ್ ದಾಟಿಯಲ್ಲಿಯೇ ಸುನಿ ತಮ್ಮದೇ ಸ್ಟೈಲ್ ನಲ್ಲಿ ನಾಯಕಿಯನ್ನು ಪರಿಚಯಿಸಿದ್ದಾರೆ. ಹೊಸ ಹೀರೋಗೆ ಆಶಿಕಾ ಹೀರೋಯಿನ್ ಆಗಲು ಸುನಿ ಹೇಗೆ ಒಪ್ಪಿಸಿದ್ರೂ ಅನ್ನೋದನ್ನು ಸಣ್ಣದೊಂದು ಝಲಕ್ ಮೂಲಕ ತೋರಿಸಿಕೊಟ್ಟಿದ್ದಾರೆ. ವಿಡಿಯೋ ಕೊನೆಯಲ್ಲಿ ನಾಯಕಿ ಆಶಿಕಾ ಲುಕ್ ರಿವೀಲ್ ಮಾಡಿದ್ದು, ದೇವಕನ್ಯೆ ಗೆಟಪ್ ನಲ್ಲಿ ಚುಟುಚುಟು ಬ್ಯೂಟಿ ಮಿಂಚಿದ್ದಾರೆ.

 

 

 

ರೋಮ್ಯಾಂಟಿಕ್ ಲವ್ ಸ್ಟೋರಿ ಗತವೈಭವ ಸಿನಿಮಾದಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಕೂಡ ಇರಲಿದ್ದು, ಈಗಾಗಲೇ 40ರಷ್ಟು ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ಆಶಿಕಾ ದುಷ್ಯಾಂತ್ ಗೆ ಜೋಡಿಯಾಗಿ ನಟಿಸಲಿದ್ದು, ದೇವಕನ್ಯೆ ಹಾಗೂ ಪೋರ್ಚುಗೀಸ್ ಯುವತಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಗತವೈಭವ ಸಿನಿಮಾಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

 

Spread the love
Click to comment

Copyright © 2019 PopcornKannada.com