Cinema News
ಉತ್ತರ ಕರ್ನಾಟಕ ಹತ್ಯಾಕಾಂಡ ಕಥೆಯ “ಗ್ಯಾಂಗ್ಸ್ ಆಫ್ ಯುಕೆ” ಏಪ್ರಿಲ್ 10ಕ್ಕೆ ಬಿಡುಗಡೆ
ಈ ವಾರ ತೆರೆಗೆ ಬರುತ್ತಿರುವ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರವನ್ನು ಡೆಡ್ಲಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ರವಿ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಮಾದೇಶ ಖ್ಯಾತಿಯ ಅವರು ನಿರ್ದೇಶಿಸಿರುವ ಈ ಸಿನಿಮಾ ಇದೇ ಶುಕ್ರವಾರ ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಂಗನಾಥ್ ರವೀಂದ್ರ ಚಿತ್ರದ ನಿರ್ಮಾಪಕರು.
ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್‌ನಲ್ಲಿ ನಡೆದ ಘಟನೆ ಆಧಾರವಾಗಿಸಿಕೊಂಡು, “ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತದೆ, ಜಿದ್ದು ಒಬ್ಬರಿಂದ ಮತ್ತೊಬ್ಬರಿಗೆ ಸಾಗುತ್ತದೆ” ಎಂಬ ಕಾನ್ಸೆಪ್ಟ್ ಮೇಲೆ ಕಥೆ ರೂಪಿಸಲಾಗಿದೆ. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್‌ಲೈನ್ ಚಿತ್ರಕ್ಕಿದೆ.
ಒರಟ ಪ್ರಶಾಂತ್, ಸೋನು ಉಪಾಧ್ಯ, ಶ್ರೀನಗರ ಮುನಿ, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅಮೋಘ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಶಿಶುನಾಳ ಶರೀಫರ ಗೀತೆಗಳೊಂದಿಗೆ ಒಟ್ಟು 9 ಹಾಡುಗಳು ಇದ್ದು, ವಿ. ಸುಕುಮಾರ್ ಸಂಗೀತ, ಆರ್. ಗಿರಿ ಛಾಯಾಗ್ರಹಣ ಹಾಗೂ ಎಲ್.ಎನ್. ರೆಡ್ಡಿ ಸಂಕಲನ ಮಾಡಿದ್ದಾರೆ.