Reviews

ಪರಭಾಷಿಕರಿಗೆ ಗಣೇಶ್‌ ಕೊಡ್ತಾರೆ ಗುನ್ನಾ

Published

on

ಗಣೇಶ್‌ ನಟನೆಯ ‘ಗೀತಾ’ ಸಿನಿಮಾದ ಟೀಸರ್‌ ಸೋಮವಾರ ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಸಿನಿಮಾದಲ್ಲಿ ಗಣೇಶ್‌ ಅಪ್ಪಟ ಕನ್ನಡ ಹೋರಾಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ ಗೋಕಾಕ್‌ ವರದಿಗಾಗಿ ನಡೆದ ಚಳುವಳಿಯನ್ನು ಬಳಸಿಕೊಳ್ಳಲಾಗಿದೆಯಂತೆ.

 

ಕನ್ನಡ ಹೋರಾಟಗಾರರಾಗಿ ಗಣೇಶ್‌ ಕನ್ನಡವನ್ನು ನಿರ್ಲಕ್ಷ್ಯ ಮಾಡುವ ಪರಭಾಷೆಯವರಿಗೆ ಗುನ್ನಾ ಕೊಡಲಿದ್ದಾರೆ. ಸಂತೋಷ್‌ ಆನಂದ್‌ರಾಮ್‌ ಬಳಿ ಕೆಲಸ ಮಾಡಿದ್ದ ವಿಜಯ್‌ ನಾಗೇಂದ್ರ ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. 1980ರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಗಣೇಶ್‌ಗೆ ಇಲ್ಲಿ ಮೂವರು ನಾಯಕಿಯರಿದ್ದಾರೆ. ಸಯ್ಯದ್‌ ಸಲಾಂ ಮತ್ತು ಶಿಲ್ಪಾ ಗಣೇಶ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

 

 

ಗೋಕಾಕ್‌ ಚಳುವಳಿಗೆ ಡಾ. ರಾಜ್‌ಕುಮಾರ್‌ ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದರು. ಇದರ ಫಲವಾಗಿ ಆ ವರದಿ ಜಾರಿಯಾಗಿತ್ತು. ಈಗ ಗೀತಾ ಸಿನಿಮಾದಲ್ಲಿಯೂ ಈ ಚಳುವಳಿಯ ಕಂಟೆಂಟ್‌ನ್ನು ನಿರ್ದೇಶಕರು ಇಟ್ಟಿದ್ದಾರಂತೆ. ಇನ್ನು ಸಿನಿಮಾದ ಟೀಸರ್‌ನಲ್ಲಿ ಗಣೇಶ್‌ ಅವರ ಲುಕ್‌ , ಅವರ ಬೈಕ್‌, ಎಲ್ಲವೂ ಗಮನ ಸೆಳೆದಿದ್ದು, ಈಗಾಗಲೇ ಲಕ್ಷಾಂತರ ಮಂದಿ ಟೀಸರ್‌ನ್ನು ನೋಡಿದ್ದಾರೆ. ಇದು ಗಣೇಶ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಟೀಸರ್‌ ಆಗಿದೆ. ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.

Spread the love
Click to comment

Copyright © 2019 PopcornKannada.com