Cinema News

‘ಫಾದರ್ಸ್ ಡೇ’ಗೆ ಪ್ರಚಾರದ ಜೋರು; ALL OK ಸಂಗೀತದ ಪ್ರಮೋಷನ್ ಹಾಡು ಬಿಡುಗಡೆ

Published

on

ELEVEN ELEMENTS ಸಂಸ್ಥೆಯಡಿ ರಾಜಾರಾಮ್ ರಾಜೇಂದ್ರನ್ ನಿರ್ಮಿಸಿ ನಿರ್ದೇಶಿಸಿರುವ ‘ಫಾದರ್ಸ್ ಡೇ’ ಚಿತ್ರ ಇದೇ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ತಂದೆ-ಮಗನ ಭಾವನಾತ್ಮಕ ಬಾಂಧವ್ಯವನ್ನು ಆಧರಿಸಿದ ಈ ಸಿನಿಮಾ ಕನ್ನಡದ ಮೊದಲ ಬೈಕರ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ ALL OK ಸಂಗೀತದ ಪ್ರಮೋಷನ್ ಸಾಂಗ್ ಅನ್ನು ಅನಾವರಣಗೊಳಿಸಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

 

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ರಾಜಾರಾಮ್ ರಾಜೇಂದ್ರನ್, ಒಂದು ದಿನದ ಅವಧಿಯಲ್ಲಿ ನಡೆಯುವ ಕಥೆಯೇ ಚಿತ್ರದ ವಿಶೇಷ ಎಂದರು. ಸಹಪ್ರಯಾಣಿಕರಾಗಿರುವ ಇಬ್ಬರು ತಂದೆ-ಮಗ ಎಂಬುದು ಪ್ರೇಕ್ಷಕರಿಗೆ ತಿಳಿದಿದ್ದರೂ, ಪಾತ್ರಗಳಿಗೆ ಅದು ಗೊತ್ತಿಲ್ಲದಿರುವ ಕಥಾನಕ ಕುತೂಹಲ ಮೂಡಿಸುತ್ತದೆ. ಚಿತ್ರದಲ್ಲಿ ನೈಜ ಚಿತ್ರೀಕರಣದ ವೇಳೆ ದಾಖಲಾದ ಸಂಭಾಷಣೆಗಳನ್ನೇ ಬಳಸಲಾಗಿದ್ದು, ಅಚ್ಚರಿಯ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಿದರು. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A 7+ ಪ್ರಮಾಣಪತ್ರ ದೊರೆತಿದೆ.

 

 

 

 

 

ನಟ ಅಜಿತ್ ಹಂಡೆ, ಇದು ಕನ್ನಡಕ್ಕೆ ಹೊಸ ರೀತಿಯ ಕೌಟುಂಬಿಕ ಸಿನಿಮಾ ಎಂದು ಹೇಳಿ, 1200 ಸಿಸಿ ಬೈಕ್ ಓಡಿಸಿದ ಅನುಭವವನ್ನು ಹಂಚಿಕೊಂಡರು. ನಾಯಕ ಹರ್ಷಿಲ್ ಕೌಶಿಕ್ ಮಾತನಾಡಿ, ಎಲ್ಲಾ ವಯಸ್ಸಿನವರು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಮನರಂಜನಾ ಚಿತ್ರ ಇದಾಗಿದ್ದು, ALL OK ನೀಡಿರುವ ಪ್ರಮೋಷನ್ ಸಾಂಗ್ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದಿದೆ ಎಂದರು.

 

 

 

 

 

ಪ್ರಮೋಷನ್ ಹಾಡಿಗೆ ಸಂಗೀತ ನೀಡಿರುವ ALL OK, ಚಿತ್ರದ ಉಳಿದ ಹಾಡುಗಳಿಗೆ ಜೋ ಪ್ಯಾನಿಕರ್ ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು. ನಟಿ ಸಮ್ರಾಗ್ನಿ ರಾಜನ್ ಬೈಕ್ ರೈಡರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬೈಕ್ ಸವಾರಿ ತಮ್ಮ ಜೀವನದ ಭಾಗವೇ ಆಗಿದೆ ಎಂದರು. ಕ್ಷೇಮ ಶೆಟ್ಟಿ, ಜೋ ಪ್ಯಾನಿಕರ್ ಸೇರಿದಂತೆ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿತು. PVR INOX Pictures ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.

Spread the love

Copyright © 2019 PopcornKannada.com