Cinema News

“ಗನ್ಸ್ ಅಂಡ್ ರೋಸಸ್” ಚಿತ್ರದಲ್ಲಿ ಖ್ಯಾತ ನಟ ಕಿಶೋರ್ .

Published

on

ಹೆಚ್ ಆರ್ ನಟರಾಜ್ ನಿರ್ಮಾಣದ, ಹೆಚ್ ಎಸ್ ಶ್ರೀನಿವಾಸಕುಮಾರ್ ನಿರ್ದೇಶನದಲ್ಲಿ ಅರ್ಜುನ್ ನಾಯಕರಾಗಿ ನಟಿಸಿರುವ “ಗನ್ಸ್ ಅಂಡ್” ರೋಸಸ್ ಚಿತ್ರದಲ್ಲಿ ಖ್ಯಾತ ನಟ ಕಿಶೋರ್ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ ಅವರು ಕಾಣಿಸಿಕೊಂಡಿದ್ದು, ಇತ್ತೀಚಿಗೆ ಅವರು ಅಭಿನಯಿಸಿದ ಸನ್ನಿವೇಶಗಳನ್ನು ಬೆಂಗಳೂರಿನಲ್ಲಿ ಚಿತ್ರಿಸಿಕೊಳ್ಳಲಾಗಿದೆ. “ಗನ್ಸ್ ಅಂಡ್ ರೋಸಸ್” ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಒಂದೆರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ಶರತ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮಲ್ಲೇನಹಳ್ಳಿ ರಾಜು ನಿರ್ಮಾಣ ನಿರ್ವಹಣೆ ಮತ್ತು ಮುನಿರಾಜ್ (ಕಬ್ಜ) ಅವರ ಸಹ ನಿರ್ದೇಶನವಿದೆ.

ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಕಿಶೋರ್, ಶೋಭ್ ರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್, ಡೈಮಂಡ್‌ ರಾಜಣ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

Spread the love
Click to comment

Copyright © 2019 PopcornKannada.com