Cinema News
ಸವದತ್ತಿ ಎಲ್ಲಮ್ಮನ ಆಶೀರ್ವಾದ ಪಡೆದ ‘ಸಲಗ’ ದುನಿಯಾ ವಿಜಯ್
ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘ಸಲಗ’ ಚಿತ್ರತಂಡ ಉತ್ತರ ಕರ್ನಾಟಕದ ಸವದತ್ತಿ ಎಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡಿದೆ.
ನಟ, ನಿರ್ದೇಶಕ ವಿಜಯ್, ಸಂಭಾಷಣೆಕಾರ ಮಾಸ್ತಿ, ಸಹ ನಿರ್ದೇಶಕ ಅಭಿ, ನಿರ್ಮಾಪಕರಾದ ಶ್ರೀಕಾಂತ್ ಮತ್ತು ನಾಗೇಂದ್ರ ಸೇರಿದಂತೆ ಇಡೀ ತಂಡ ಎಲ್ಲಮ್ಮನ ಆಶೀರ್ವಾದ ಪಡೆದುಕೊಂಡಿದೆ.
ವಿಜಯ್ ಮೊದಲಿನಿಂದಲೂ ದೇವಿಯ ಭಕ್ತರಾಗಿದ್ದು, ತಮ್ಮ ಹೊಸ ಸಿನಿಮಾ ಆರಂಭವಾಗುವ ಸಮಯದಲ್ಲಿ ಪ್ರತಿ ಭಾರಿಯೂ ಇಲ್ಲಿಗೆ ಭೇಟಿ ನೀಡುತ್ತಾರೆ.
ಸಲಗದಲ್ಲಿ ವಿಜಯ್ ಜತೆ ಡಾಲಿ ಧನಂಜಯ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ತುಂಬಿದೆ. ನವೀನ್ ಸಜ್ಜು ಮತ್ತು ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ.
ಜೂನ್ 6ಕ್ಕೆ ಮುಹೂರ್ತ ನಡೆಯಲಿದ್ದು, 10ರಿಂದ ಚಿತ್ರೀಕರಣ ಆರಂಭವಾಗಲಿದೆ.