Cinema News

RC17ಗೆ ಡೈರೆಕ್ಟರ್ ಫಿಕ್ಸ್..ಮತ್ತೊಮ್ಮೆ ರಾಮ್ ಚರಣ್ ಜೊತೆ ಕೈ ಜೋಡಿಸಿದ ಸುಕುಮಾರ್..

Published

on

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೋಳಿ ಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೇಮ್ ಚೇಂಜರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್, ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಆರ್ ಸಿ 16 ಸಿನಿಮಾಗೆ ಬುಚ್ಚಿ ಬಾಬು ಆಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಟೇಕಾಫ್ ಗೂ ಮೊದ್ಲೇ ಚೆರ್ರಿಯ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.

ಮೈತ್ರಿ ಮೂವೀ ಮೇಕರ್ಸ್, ರಾಮ್ ಚರಣ್ ಹಾಗೂ ಪುಷ್ಪ ಡೈರೆಕ್ಟರ್ ಸುಕುಮಾರ್ ಮತ್ತೆ ಒಂದಾಗಿದ್ದಾರೆ. ರಂಗಸ್ಥಳಂ ಮೂಲಕ ಧಮಾಕ ಎಬ್ಬಿಸಿದ್ದ ಈ ತ್ರಿವಳಿ ಕಾಂಬೋದಲ್ಲಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಬಣ್ಣದ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

ತ್ರಿಬಲ್ ಆರ್ ಸಿನಿಮಾ ಬಳಿಕ ಶಂಕರ್ ಸಾರಥ್ಯದ ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ನಟಿಸ್ತಿದ್ದಾರೆ. ಜೊತೆಗೆ ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬುಗೂ ಕಾಲ್ ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚೋದಿಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ಹಣ ಹಾಕುತ್ತಿರುವ ಈ ಸಿನಿಮಾಗೆ ರಾಕ್ ಸ್ಟಾರ್ ದೇವಿ ಪ್ರಸಾದ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆದ ರಂಗಸ್ಥಳಂ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದ ಡಿಎಸ್ ಪಿ ಮತ್ತೆ ಸುಕುಮಾರ್ ಹಾಗೂ ರಾಮ್ ಸಿನಿಮಾ ಮೂಲಕ ಧಮಾಕ ಎಬ್ಬಿಸಲಿದ್ದಾರೆ. ಅಂದಹಾಗೇ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಈ ಚಿತ್ರ ಮೂಡಿಬರಲಿದೆ.

Spread the love
Click to comment

Copyright © 2019 PopcornKannada.com