Cinema News

ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ “ದೇಸಾಯಿ” ಚಲನಚಿತ್ರ ತಂಡ .

Published

on

ಇತ್ತೀಚಿಗೆ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಕೊಪ್ಪಳಕ್ಕೆ ಭೇಟಿ ನೀಡಿದ ನಾಯಕ ನಟ ಪ್ರವೀಣ್ ಕುಮಾರ್, ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ ಇವರು ಸ್ವಾಮಿಗಳನ್ನು ಭೇಟಿ ಮಾಡಿ, ಇತ್ತೀಚಿಗೆ ಬಿಡುಗಡೆಯಾಗಿದ್ದ “ದೇಸಾಯಿ” ಚಿತ್ರದ ಟೀಸರ್ ಹಾಗೂ ಹಾಡನ್ನು ಮೊಬೈಲ್ ನಲ್ಲೇ ಶ್ರೀಗಳಿಗೆ ತೋರಿಸಿದರು. ಇದನ್ನು ನೋಡಿದ ಸ್ವಾಮಿಗಳು ಟೀಸರ್ ಹಾಗೂ ಹಾಡು ಚೆನ್ನಾಗಿ ಮೂಡಿಬಂದಿದೆ. ಒಂದು ಒಳ್ಳೆಯ ಕೌಟುಂಬಿಕ ಚಿತ್ರವನ್ನು ನಿರ್ಮಾಣ ಮಾಡಿದ್ದೀರಿ. ನಿಮಗೆ ಶುಭವಾಗಲಿ ಎಂದು ಶ್ರೀಗಳು‌ ಹಾರೈಸಿ, ಶಾಲು ಹೊದಿಸಿ ಆಶೀರ್ವಾದಿಸಿದರು.

ನಂತರ ಪೂಜ್ಯರು ಪ್ರಸಾದ ಸೇವಿಸಿ, ಅಜ್ಜನವರ ಗದ್ದುಗೆ ದರ್ಶನ ಮಾಡಿಕೊಂಡು ಹೋಗಿರಿ ಎಂದರು. ಅವರ ಮಾರ್ಗದರ್ಶನದಂತೆ ಗದ್ದುಗೆ ದರ್ಶನ ಪಡೆದು ಪ್ರಸಾದ ಸೇವಿಸಿ ಗುರುಗಳಿಂದ ಆಶೀರ್ವಾದ ಪಡೆದುಕೊಂಡೆವು. ಈ ಸಂದರ್ಭದಲ್ಲಿ ನಮ್ಮ ಜೊತೆಗೆ ಕೊಪ್ಪಳದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ತೋಟ್ಟಪ್ಪ ಕಾಮನೂರು ಮತ್ತು ಬಸವರಾಜ್ ಬುಡ್ಡನಗೌಡರ, ಶರಣಪ್ಪ ನಾವೋಜಿ, ಅಶೋಕ್ ಲಾಗಲೋಟಿ, ನಿಂಗಣ್ಣ ಗೋಡಿ, ಸಂಗನಗೌಡ ವಿ ಟಿ ಪಾಟೀಲ್, ಎನ್ ಸಿ ಗೌಡರ, ಮಂಜುನಾಥ್ ಪಾಟೀಲ್ ಇನ್ನು ಅನೇಕ ಯುವಕರು ಮತ್ತು ಅಭಿಮಾನಿ ಬಳಗ ಸೇರಿದರು.

Spread the love
Click to comment

Copyright © 2019 PopcornKannada.com