Cinema News
‘ರಾಮರಸ’ದಲ್ಲಿ ಡೆಡ್ಲಿ ಆದಿತ್ಯ ಎಂಟ್ರಿ – ‘ವೀರ ದುರ್ಮುರ್ಗಿ’ಯಾಗಿ ಹೊಸ ಅವತಾರ!
ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಮೆಥಿಕಲ್ ಡ್ರಾಮಾ ‘ರಾಮರಸ’ ಚಿತ್ರತಂಡ ಮತ್ತೊಂದು ಕುತೂಹಲಕಾರಿ ಪಾತ್ರವನ್ನು ಪರಿಚಯಿಸಿದೆ. ಚಿತ್ರೀಕರಣ ಪೂರ್ಣಗೊಳಿಸಿರುವ ಸಿನಿಮಾ ಇದೀಗ ಹೈ-ಎಂಡ್ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಇದೇ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಡೆಡ್ಲಿ ಆದಿತ್ಯ ಚಿತ್ರದ ತಾರಾಬಳಗಕ್ಕೆ ಸೇರ್ಪಡೆಯಾಗಿರುವುದನ್ನು ಘೋಷಿಸಲಾಗಿದೆ. ಚಿತ್ರದಲ್ಲಿ ಆದಿತ್ಯ ಅವರು ‘ವೀರ ದುರ್ಮುರ್ಗಿ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತೀವ್ರ ಅಭಿನಯ ಮತ್ತು ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಆದಿತ್ಯ ಅವರಿಗೆ ‘ರಾಮರಸ’ದಲ್ಲಿ ಈವರೆಗೆ ಕಾಣದಂತಹ ಅವತಾರ ಸಿಕ್ಕಿದೆ. ಕಥೆಯಲ್ಲಿ ‘ವೀರ ದುರ್ಮುರ್ಗಿ’ ಪಾತ್ರವು ಪ್ರಮುಖ ತಿರುವಿಗೆ ಕಾರಣವಾಗಲಿದ್ದು, ಶಕ್ತಿ, ಭಯ ಹಾಗೂ ವಿನಾಶದ ಪ್ರತೀಕವಾಗಿ ಪಾತ್ರವನ್ನು ರೂಪಿಸಲಾಗಿದೆ. ದಶ ಮಹಾವಿದ್ಯೆಯ ರಹಸ್ಯದ ಪ್ರಮುಖ ಅಂಶಗಳು ಈ ಪಾತ್ರದ ಸುತ್ತ ಸಾಗಲಿವೆ ಎಂದು ಚಿತ್ರತಂಡ ತಿಳಿಸಿದೆ.
ಪಾರಂಪರಿಕ ಜಾನಪದ, ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳು ಹಾಗೂ ಫ್ಯಾಂಟಸಿ ಅಂಶಗಳಿಂದ ರೂಪುಗೊಂಡಿರುವ ‘ರಾಮರಸ’ದಲ್ಲಿ ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಗುರು ಸಿದ್ಧನಾಗಿ, ಕಾರ್ತಿಕ್ ಮಹೇಶ್, ಅದಾ ಶರ್ಮಾ, ಶರಣ್ ಇಂದ್ರ ದೇವೇಂದ್ರನಾಗಿ, ಹೇಬಹ್ ಪಟೇಲ್, ಬಾಲಾಜಿ ಮನೋಹರ್, ವೈಶಾಲಿ ಹಾಗೂ ಆದಿತ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿ.ಎಂ. ಗಿರಿರಾಜ್ ನಿರ್ದೇಶನದ ಚಿತ್ರಕ್ಕೆ ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ನಿರ್ಮಾಪಕರಾಗಿದ್ದು, ಜಿ ಸಿನಿಮಾಸ್ ಪ್ರೊಡಕ್ಷನ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಚಿತ್ರದ ಎಡಿಟಿಂಗ್, ವಿಎಫ್‌ಎಕ್ಸ್ ಹಾಗೂ ಸೌಂಡ್ ಡಿಸೈನಿಂಗ್ ಸೇರಿದಂತೆ ಹೈ-ಎಂಡ್ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಏ.ವಿ. ಕೃಷ್ಣ ಕುಮಾರ್ (ಕೆಕೆ) ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ನಿರ್ವಹಿಸಿದ್ದಾರೆ. ಇನ್ನೂ ಹಲವು ಪ್ರಮುಖ ಪಾತ್ರಗಳು ಮತ್ತು ತಾರೆಯರ ಪರಿಚಯ ಬಾಕಿಯಿದ್ದು, ಶೀಘ್ರದಲ್ಲೇ ಟೀಸರ್ ಬಿಡುಗಡೆ ದಿನಾಂಕ ಹಾಗೂ ಹೊಸ ಪಾತ್ರಗಳ ಫಸ್ಟ್ ಲುಕ್‌ಗಳನ್ನು ಚಿತ್ರತಂಡ ಅನಾವರಣಗೊಳಿಸಲಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ದೂರಿ ಬಿಡುಗಡೆಗೆ ‘ರಾಮರಸ’ ಸಜ್ಜಾಗುತ್ತಿದೆ.