Cinema News

ಡಾಲಿ ಧನಂಜಯ ‘ಮದರ್ ಪ್ರಾಮಿಸ್’ ಫಸ್ಟ್ ಸಾಂಗ್ ರಿಲೀಸ್ – RCB ಫ್ಯಾನ್ಸ್ ಫುಲ್ ಖುಷ್

Published

on

ಡಾಲಿ ಧನಂಜಯ ನಿರ್ಮಿಸಿರುವ ಡಾಲಿ ಪಿಕ್ಚರ್ಸ್ ಬ್ಯಾನರ್‌ನಡಿ ಮೂಡಿಬರುತ್ತಿರುವ ‘ಮದರ್ ಪ್ರಾಮಿಸ್’ ಸಿನಿಮಾದ ಮೊದಲ ಹಾಡು ಬಿಡುಗಡೆಗೊಂಡಿದೆ. RCB ಹಿನ್ನೆಲೆಯ ಈ ಹಾಡು ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುತ್ತಿದೆ. ಸ್ನೇಹಿತರ ಬಳಗದೊಂದಿಗೆ ತಯಾರಾದ ಈ ಚಿತ್ರವನ್ನು ಪೂರ್ಣ ಮೈಸೂರು ನಿರ್ದೇಶಿಸಿದ್ದು ವಿಶೇಷ. ನಿರ್ಮಾಣದಲ್ಲಿ ಹರ್ಷ ಸಹಭಾಗಿಯಾಗಿದ್ದಾರೆ.

 

 

 

 

 

ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಕುತೂಹಲ ಮೂಡಿಸಿತ್ತು. ಈಗ ಬಿಡುಗಡೆಯಾದ ಮೊದಲ ಹಾಡಿಗೆ ಖ್ಯಾತ ಗಾಯಕ ಗುರುಕಿರಣ್ ಧ್ವನಿಯಾಗಿದ್ದು, ಬಹುಕಾಲದ ಬಳಿಕ ಅವರ ವಾಯ್ಸ್ ಕೇಳುವುದು ವಿಶೇಷವಾಗಿದೆ. ಹಾಡಿನಲ್ಲಿ ಡಾಲಿ ಧನಂಜಯ ವೈಟ್ ಸೂಟ್‌ನಲ್ಲಿ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡು ಸಖತ್ ಸ್ಟೆಪ್ ಹಾಕಿದ್ದಾರೆ.

 

 

 

 

 

 

ನವನೀತ್ ಶ್ಯಾಮ್ ಸಂಗೀತ ನೀಡಿರುವ ಈ ಹಾಡಿಗೆ ಶಶಾಂಕ್ ಸೋಘಲ್ ಸಾಹಿತ್ಯ ಬರೆದಿದ್ದಾರೆ. ಕಾಮಿಡಿ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನಾಗಭೂಷಣ್, ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಹಲವರು ನಟಿಸಿದ್ದಾರೆ. ‘ಡೇರ್ ಡೆವಿಲ್ ಮುಸ್ತಾಫ’ ಖ್ಯಾತಿಯ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.

Spread the love

Copyright © 2019 PopcornKannada.com