Television News

ತೂಕ ಇಳಿಸಿಕೊಂಡು 15.000 ಕೋಟಿ ಕೇಳಿದ ಲೋಕಸಭಾ ಸದಸ್ಯ

Published

on

ಉಜ್ಜೈನಿ; ತೂಕ ಇಳಿಸಿಕೊಂಡರೆ ಪ್ರತಿ ಕೆಜಿಗೆ 1000 ಕೋಟಿ ರು. ಅನುದಾನವನ್ನು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆ ಮಾಡುವುದಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಲೋಕಸಭಾ ಸದಸ್ಯ ಅನಿಲ್ ಫಿರೋಜಿಯಾ ಅವರಿಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅನಿಲ್ ಫಿರೋಜಿಯಾ 15 ಕೇಜಿ ತೂಕ ಇಳಿಸಿಕೊಂಡಿದ್ದಾರೆ.
ಫೆಬ್ರವರಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲು ಗಡ್ಕರಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಫಿರೋಜಿಯಾ ಅವರಿಗೆ ತೂಕ ಇಳಿಕೆ ಮಾಡಿಕೊಳ್ಳುವ ಚಾಲೆಂಜ್ ನೀಡಿದ್ದರು. 127 ಕೇಜಿ ತೂಕವಿದ್ದ ಫಿರೋಜಿಯಾ ಅವರಿಗೆ ತೂಕವನ್ನು ಇಳಿಸಿಕೊಳ್ಳಲು ಪ್ರೇರಣೆ ನೀಡುವುದಕ್ಕಾಗಿ ಪ್ರತಿ ಕೇಜಿ ತೂಕ ಇಳಿಸಿಕೊಂಡಿದ್ದರ ಬದಲು ಅವರ ಕ್ಷೇತ್ರಕ್ಕೆ 1000 ಕೋಟಿ ರು. ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆ ಮಾಡುವುದಾಗಿ ಗಡ್ಕರಿ ಹೇಳಿದ್ದರು.
ಅದರಂತೆ ಡಯೆಟ್, ಯೋಗ, ಸೈಕ್ಲಿಂಗ್ ಹಾಗೂ ದೈಹಿಕ ಕಸರತ್ತನ್ನು ಮಾಡಿ ಕಳೆದ 4 ತಿಂಗಳುಗಳಲ್ಲಿ 15 ಕೇಜಿ ತೂಕ ಇಳಿಸಿಕೊಂಡಿದ್ದೇನೆ. ಹೀಗಾಗಿ ಮಾತಿನಂತೆ ಸಚಿವರು ಕ್ಷೇತ್ರಕ್ಕೆ 15000 ಕೋಟಿ ರು. ಕಾಮಗಾರಿಗಾಗಿ ಅನುದಾನ ಮಂಜೂರು ಮಾಡಬೇಕೆಂದು ಕೋರುತ್ತೇನೆ’ ಎಂದು ಫಿರೋಜಿಯಾ ಹೇಳಿದ್ದಾರೆ.

Spread the love

Copyright © 2019 PopcornKannada.com