Cinema News

ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.ಫೆ.25ಕ್ಕೆ ಜೀ5 ಒಟಿಟಿಯಲ್ಲಿ ‘ದೃಶ್ಯ-2’ ಸಿನಿಮಾ..

Published

on

ಸದಾಭಿರುಚಿ ಸಿನಿಮಾಗಳು ಪ್ರೇಕ್ಷಕರಿಗೆ ನೀಡುತ್ತಿರುವ ಕನ್ನಡದ ಪ್ರತಿಷ್ಠಿತ ಒಟಿಟಿ ಫ್ಲಾರ್ಟ್ ಫಾರಂ ಜೀ5 ಈಗ ಮತ್ತೊಂದು ಸೂಪರ್ ಹೊಸ ಹಿಟ್ ಸಿನಿಮಾವನ್ನು ಚಿತ್ರರಸಿಕರ ಮಡಿಲಿಗೆ ಹಾಕ್ತಿದೆ. ಅದೇ ದೃಶ್ಯ-2.

ಕ್ರೇಜಿಸ್ಟಾರ್ ರವಿಚಂದ್ರನ್ ‘ರಾಜೇಂದ್ರ ಪೊನ್ನಪ್ಪ’ನಾಗಿ ಕಮಾಲ್ ಮಾಡಿದ್ದ ದೃಶ್ಯ-2 ಥಿಯೇಟರ್ ‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಕಳೆದ ವರ್ಷ ಡಿಸೆಂಬರ್ 10ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದ ದೃಶ್ಯ-2 ಸಿನಿಮಾ ಚಿತ್ರರಸಿಕರ ಮನಸು ಗೆದ್ದಿತ್ತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ನಟಿಸಿದ್ದ ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್​ ಸಖತ್ ಥ್ರಿಲ್​ ನೀಡಿತ್ತು. ಮಲಯಾಳಂ ದೃಶ್ಯಂ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿತ್ತು. ಥಿಯೇಟರ್ ಅಂಗಳದಲ್ಲಿ ಮ್ಯಾಜಿಕ್ ಮಾಡಿದ್ದ ದೃಶ್ಯ ಸಿನಿಮಾ ಈಗ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಫೆಬ್ರವರಿ 25ರಿಂದ ಜೀ5ಯಲ್ಲಿ ದೃಶ್ಯ ಸಿನಿಮಾದ ಪ್ರಿಮಿಯರ್ ಆರಂಭವಾಗಲಿದೆ.

ಪ್ರಮೋದ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನಂತ್ ನಾಗ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸುರೇಶ್​ ಅರಸ್​ ಸಂಕಲನ, ಜಿಎಸ್​ವಿ ಸೀತಾರಾಮ್​ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತ ‘ದೃಶ್ಯ 2’ ಸಿನಿಮಾಕ್ಕಿದೆ.

ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿರುವ ಸಿನಿಮಾ

ಜೀ 5 ಒಟಿಟಿಯಲ್ಲೀಗ ಕನ್ನಡಿಗ, ಭಜರಂಗಿ-2 ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾಗಳು ಧೂಳ್ ಎಬ್ಬಿಸ್ತಿವೆ. ಈ ಎಲ್ಲಾ ಸಿನಿಮಾಗಳನ್ನು ಪ್ರೇಕ್ಷಕ ಮೆಚ್ಚಿಕೊಂಡಿದ್ದಾನೆ. ಈಗ ದೃಶ್ಯ-2 ಸಿನಿಮಾ ಜೀ5 ಅಂಗಳ ಪ್ರವೇಶಿಸ್ತಿದ್ದು, ಥಿಯೇಟರ್ ನಲ್ಲಿ ಸಿನಿಮಾ ಮಿಸ್ ಮಾಡ್ಕೊಂಡವರು ಮನೆಯಲ್ಲಿ ಕುಳಿತು ನೋಡಿ ಎಂಜಾಯ್ ಮಾಡಿ.

Spread the love

Copyright © 2019 PopcornKannada.com