Cinema News

ರಾಜಧಾನಿ ಖ್ಯಾತಿಯ ಚೇತನ್ ಚಂದ್ರ ’15ನೇ’ ಸಿನಿಮಾ ಅನೌನ್ಸ್…ಚೇತನ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್

Published

on

ಪಿಯುಸಿ’, ‘ರಾಜಧಾನಿ’ ‘ಕುಂಭ ರಾಶಿ’ ಜಾತ್ರೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಾಯಕ ನಟ ಚೇತನ್ ಚಂದ್ರಗೆ ಹುಟ್ಟುಹಬ್ಬದ ಸಂಭ್ರಮ. ಚೇತನ್ ಬರ್ತ್ ಡೇ ಪ್ರಯುಕ್ತ 15ನೇ ಅನೌನ್ಸ್ ಆಗಿದೆ. ಜೊತೆಗೆ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ.

ಫಸ್ಟ್ ಲುಕ್ ರಿಲೀಸ್ ಮಾಡಿದ ನಿರ್ಮಾಪಕರಾದ ಭಾಮಾ ಹರೀಶ್-ಪ್ರಕಾಶ್

ಚೇತನ್ ಚಂದ್ರ 15ನೇ ಸಿನಿಮಾದ ಫಸ್ಟ್ ಲುಕ್ ನ್ನು ನಿರ್ಮಾಪಕರಾದ ಭಾಮಾ ಹರೀಶ್, ರಂಗಿತರಂಗ ಸಿನಿಮಾ ಖ್ಯಾತಿಯ ಪ್ರಕಾಶ್ ಅಭಿಮಾನಿಗಳ ಸಮ್ಮುಖದಲ್ಲಿಯೇ ಬಿಡುಗಡೆಗೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

 

 

 

 

ಚೇತನ್ ಚಂದ್ರ ಕುಟುಂಬ್ಥರು ನಮಗೆ ಹಳೆಯ ಪರಿಚಯ. ಅವರ ಎಲ್ಲಾ ಸಿನಿಮಾ ನೋಡುತ್ತಾ ಬಂದಿದೀನಿ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಮತ್ತು ಯುವ ನಿರ್ದೇಶಕ ಅಗ್ನಿ ಅವರಿಗೆ ಒಳ್ಳೆಯದಾಗಲಿ ಎಂದು ನಿರ್ಮಾಪಕ ಭಾಮಾ ಹರೀಶ್ ಶುಭಾಶಯ ಕೋರಿದ್ದಾರೆ.

ಪೋಸ್ಟರ್ ತುಂಬಾ ಚೆನ್ನಾಗಿ ಬಂದಿದೆ. ಚೇತನ್ ಹೊಸ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಅದಷ್ಟು ಬೇಗ ಚೇತನ್ ಇನ್ನೊಂದು ಸಿನಿಮಾ ಮಾಡಲಿ ಎಂದು ನಿರ್ಮಾಪಕ ಪ್ರಕಾಶ್ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

ಆಂಕರ್, ಮಾಡೆಲ್ ಹಾಗೂ ಸೀರಿಯಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿರುವ ಯುವ ನಿರ್ದೇಶಕ ಅಗ್ನಿ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಲವ್ ಕಂ ಆಕ್ಷನ್ ಥ್ರಿಲ್ಲರ್ ಜಾನರ್ ನಲ್ಲಿ‌ ಮೂಡಿ ಬರಲಿರುವ ಈ ಹೊಸ ಸಿನಿಮಾಗೆ ತ್ರಿಬಲ್ ಸಿ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಿದೆ. ಸದ್ಯದಲ್ಲಿಯೇ ಸಿನಿಮಾದ ಮುಹೂರ್ತ‌ ನೆರವೇರಿಸಲು ಚಿತ್ರತಂಡ ಪ್ಲ್ಯಾನ್ ಹಾಕಿದ್ದು, ಆ ದಿನವೇ ಟೈಟಲ್ ಹಾಗೂ‌ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಂತ್ರಜ್ಞರ ಮಾಹಿತಿ ನೀಡಲಿದೆ.

Spread the love
Click to comment

Copyright © 2019 PopcornKannada.com