Cinema News
ಬಜಾರ್ ಧನ್ವೀರ್‌ಗೆ ಕಥೆ ಬರೆದ ಬಹದ್ದೂರ್ ಚೇತನ್
ಭರ್ಜರಿ, ಬಹದ್ದೂರ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಯಶಸ್ಸು ಗಳಿಸಿರುವ ಚೇತನ್‌ಕುಮಾರ್ ಸದ್ಯ ‘ಭರಾಟೆ’ ಚಿತ್ರದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಇದೇ ಸಮಯದಲ್ಲಿ ಬಜಾರ್ ಚಿತ್ರದ ನಾಯಕ ಧನ್ವೀರ್‌ಗಾಗಿ ಕಮರ್ಷಿಯಲ್ ಎಂಟರ್‌ಟೇನರ್ ಕಥೆಯನ್ನು ಬರೆದಿದ್ದಾರೆ.
ಹೌದು, ಚೇತನ್ ಬರೆದ ಕಥೆಯಲ್ಲಿ ಧನ್ವೀರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸುಪ್ರೀತ್ ಬಂಡವಾಳ ಹೂಡುತ್ತಿದ್ದಾರೆ. ಚೇತನ್ ಬರೀ ಕಥೆ ಮಾತ್ರವಲ್ಲ,ಚಿತ್ರಕಥೆ,ಸಂಭಾಷಣೆ ಸಹ ಬರೆಯಲಿದ್ದಾರೆ. ಸದ್ಯಕ್ಕೆ ನಿರ್ದೇಶಕರ್ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ.
‘ಇದೊಂದು ಪಕ್ಕಾ ಮಾಸ್ ಮತ್ತು ಫ್ಯಾಮಿಲಿ ಎಂಟರ್‌ಟೇನ್ಮೆಂಟ್ ಇರುವ ಕಥೆಯಾಗಿದ್ದು, ಈ ಪಾತ್ರಕ್ಕೆ ಧನ್ವೀರ್ ಸೂಟ್ ಆಗುತ್ತಾರೆ. ಅಲ್ಲದೆ ಬಜಾರ್‌ನಲ್ಲಿ ಅವರೊಬ್ಬ ಮಾಸ್ ಹೀರೋ ಎಂದು ಗುರುತಿಸಿಕೊಂಡಿದ್ದರು. ಈಗ ಈ ಚಿತ್ರದ ಮೂಲಕ ಫ್ಯಾಮಿಲಿ ಎಂಟರ್‌ಟೇನರ್ ಎನ್ನಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಚೇತನ್.