Cinema News
‘ಡಾಲಿ’ಗೆ ಪ್ರೀತಿಗೆ ಬಿದ್ದ ಬುಲ್‌ಬುಲ್
ಟಗರು ಸಿನಿಮಾ ಮೂಲಕ ಮಾರ್ಕೇಟ್ ಹೆಚ್ಚಿಸಿಕೊಂಡ ಡಾಲಿ ಧನಂಜಯ, ಈಗ ಸಿನಿಮಾ ಮೇಲೆ ಸಿನಿಮಾಗಳನ್ನುಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ನಟಿಸಲು ಒಪ್ಪಿಕೊಂಡಿರುವ ಡಾಲಿ ಸಿನಿಮಾದಲ್ಲಿ ಧನಂಜಯಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದಾರೆ.
ಹೌದು ಟಗರು ಸಿನಿಮಾದಲ್ಲಿ ಡಾಲಿ ಎಂಬ ಕ್ಯಾರೆಕ್ಟರ್ ಮಾಡಿದಾಗಿನಿಂದಲೂ ಅವರ ಖದರ್ ಬದಲಾಗಿದೆ. ಈಗ ಡಾಲಿ ಎಂಬ ಹೆಸರಿನ ಸಿನಿಮಾ ಸೆಟ್ಟೇರುತ್ತಿದ್ದು, ಅದನ್ನು ಗಣಪ ಸಿನಿಮಾ ಖ್ಯಾತಿ ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿಯೇ ರಚಿತಾ ಧನಂಜಯಗೆ ಜೋಡಿಯಾಗಿದ್ದಾರೆ.
ಇನ್ನು ಎರಡನೇ ಸಲ ಚಿತ್ರವನ್ನು ನಿರ್ಮಾಣ ಮಾಡಿದ್ದ ಯೋಗೇಶ್ ಡಾಲಿಗೆ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ರಚಿತಾರನ್ನು ಭೇಟಿಯಾಗಿ ಕಥೆ ಹೇಳಿದ್ದು, ರಚಿತಾ ಕೂಡಾ ಹೊಸ ರೀತಿಯ ಪಾತ್ರ ನಿರ್ವಹಿಸಲು ಎಕ್ಸೈಟ್ ಆಗಿದ್ದಾರೆ. ಈ ಸಿನಿಮಾಗೆ ಟಗರು ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.