Cinema News

ಭೂಗತ ಜಗತ್ತಿನ ಕಪಿಮುಷ್ಟಿಯಲ್ಲಿದ್ದ ಬಾಲಿವುಡ್: ಇದರಿಂದಲೇ ಹಿನ್ನಡೆಯಾಯ್ತು ಎಂದು ನಟಿ ಸೋನಾಲಿ ಬೇಂದ್ರೆ

Published

on

ಬಾಲಿವುಡ್ ಖ್ಯಾತ ನಟಿ ಸೋನಾಲಿ ಬೇಂದ್ರೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಅವರು ನೀಡಿರುವ ಹೇಳಿಕೆ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಾಲಿವುಡ್ ನ ಕರಾಳ ದಿನಗಳನ್ನು ನೆನಪು ಮಾಡಿಕೊಂಡಿರುವ ನಟಿ ನಟಿಸುವ ವಿಚಾರಕ್ಕೆ ಕಾರಣವಾಗಿದ್ದು ಭೂಗತ ಜಗತ್ತು ಎಂದಿದ್ದಾರೆ.
ಭೂಗತ ಜಗತ್ತಿನ ಕಪಿಮುಷ್ಠಿಯಲ್ಲಿ ಬಾಲಿವುಡ್ ಸಿನಿಮಾ ರಂಗವಿತ್ತು. ನೇರವಾಗಿ ಅವರು ಉದ್ಯಮದಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ಪರೋಕ್ಷವಾಗಿ ಅವರು ಬಾಲಿವುಡ್ ಅನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಅವರು ಹೇಗೆ ಹೇಳುತ್ತಿದ್ದರೋ, ಹಾಗೆಯೇ ಸಾಕಷ್ಟು ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಕೇಳಬೇಕಿತ್ತು. ಈ ಕಾರಣದಿಂದಾಗಿ ನನಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ನಾನೂ ಕೂಡ ಯಾರನ್ನು ದುಂಬಾಲು ಬಿದ್ದು ಅವಕಾಶಕ್ಕಾಗಿ ಕೇಳಲಿಲ್ಲ. ಪಾತ್ರಗಳು ಹೇಗೆ ಆಯ್ಕೆ ಆಗುತ್ತಿದ್ದವು ಎನ್ನುವ ಅರಿವು ನನಗಾಗಿದ್ದರಿಂದ ನಾನು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ ಎಂದಿದ್ದಾರೆ.

Spread the love
Click to comment

Copyright © 2019 PopcornKannada.com