Cinema News

ಬಾಲಿವುಡ್‌ ಸ್ಯಾಂಡಲ್‌ ವುಡ್‌ ಸ್ಟಾರ್‌ ಗಳ ಸಮಾಗಮ “ವೈಲ್ಡ್‌ ಟೈಗರ್‌ ಸಫಾರಿ”

Published

on

ವೈಲ್ಡ್‌ ಟೈಗರ್‌ ಸಫಾರಿ…. ಹೆಸರೇ ಹೇಳುವಂತೆ ಇದೊಂದು ವೈಲ್ಡ್‌ ಟೈಗರ್‌ ಗಳಂತಿರೋ ಮನುಷ್ಯರ ಕಥೆ ಹೇಳುವ ಸಿನಿಮಾ….ಕೆಜಿಎಫ್‌ ನಂತ್ರ ಡೈಲಾಗ್‌ ರೈಟರ್‌ ಚಂದ್ರಮೌಳಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಎರಡನೇ ಸಿನಿಮಾ. ವೈಲ್ಡ್‌ ಟೈಗರ್‌ ಸಫಾರಿ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು ಸದ್ಯ ಸಿನಿಮಾತಂಡ ಚಿತ್ರದಲ್ಲಿ ಅತ್ಯಂತ ವೈಲ್ಡ್‌ ಎನ್ನಿಸಿಕೊಳ್ಳೋ ಟೈಗರ್‌ ಅಂದ್ರೆ ಸಿನಿಮಾದ ವಿಲನ್‌ ಪಾತ್ರದ ಫಸ್ಟ್‌ ಲುಕ್‌ ರಿವಿಲ್‌ ಮಾಡಿದ್ದಾರೆ…

 

 

 

ಶಿಥಿಲ್‌ ಪೂಜಾರಿ ನಾಯಕನಾಗಿ ಅಭಿನಯ ಮಾಡ್ತಿರೋ ವೈಲ್ಡ್‌ ಟೈಗರ್‌ ಸಫಾರಿ ಸಿನಿಮಾದಲ್ಲಿ ಸುಶಾಂತ್‌ ಪೂಜಾರಿ ಖಳನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ…ಚಿತ್ರದಲ್ಲಿ ಸುಶಾಂತ್‌.. ಅಮರ್‌ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು ಪಾತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ರಿವಿಲ್‌ ಆಗಿದೆ…ಪೋಸ್ಟರ್‌ ಸಖತ್‌ ವೈಲ್ಡ್‌ ಆಗಿದ್ದು ಕ್ರೂರತೆ ಎದ್ದು ಕಾಣ್ತಿದೆ…ಇಡೀ ಸಿನಿಮಾದಲ್ಲಿ ಹೆಚ್ಚು ಕ್ರೂರತ್ವ ತುಂಬಿರೋ ಪಾತ್ರ ಇದಾಗಿದ್ದು ಹುಲಿಗಳ ಸಾಮ್ರಾಜ್ಯದಲ್ಲಿ ಅತೀ ಹೆಚ್ಚು ಕ್ರೂರ ಹುಲಿ ಅಂದ್ರೆ ಇದೇ ಅನ್ನೋನರೀತಿಯಲ್ಲಿ ಈ ಪಾತ್ರದ ಪರಿಚಯ ಮಾಡ್ತಾರೆ ನಿರ್ದೇಶಕ ಚಂದ್ರಮೌಳಿ .

 

 

ಇವರುಗಳ ಜೊತೆಗೆ ಸಿನಿಮಾದಲ್ಲಿ ಕನ್ನಡ ಸೇರಿದಂತೆ ಬಾಲಿವುಡ್‌ ಸ್ಟಾರ್‌ ಗಳು ಕೂಡ ಅಭಿನಯ ಮಾಡುತ್ತಿದ್ದಾರೆ..ವೈಲ್ಡ್‌ ಟೈಗರ್‌ ಸಫಾರಿ ಸಿನಿಮಾ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ತೆರೆಗೆ ಬರಲಿದೆ..ಚಿತ್ರದಲ್ಲಿ ಶಿಥಿಲ್‌ ಪೂಜಾರಿ ಸೇರಿದಂತೆ ಬಾಲಿವುಡ್‌ ನ ಜನಪ್ರಿಯ ಡ್ಯಾನ್ಸರ್‌ ಗಳಾದ ಸುಶಾಂತ್‌ ಪೂಜಾರಿ, ಧರ್ಮೇಶ್‌ ಇನ್ನು ಅನೇಕರು ಅಭಿನಯಿಸಿದ್ದಾರೆ..ಇನ್ನು ಸಿನಿಮಾಗೆ ನಿಮಿಕಾ ರತ್ನಾಕರ್‌ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಚಂದ್ರಮೌಳಿ .ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ…ಸಚಿನ್‌ ಬಸರೂರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ..ಗುರುಪ್ರಸಾದ್‌ ನರ್ನಾಡ್ ಅವರ ಛಾಯಾಗ್ರಹಣ ಸಿನಿಮಾಗಿದೆ..ಇನ್ನು ವೈಲ್ಡ್‌ ಟೈಗರ್‌ ಸಫಾರಿ ಸಿನಿಮಾವನ್ನ ವಿಕೆ ಫಿಲ್ಮಂಸ್ ಅಡಿಯಲ್ಲಿ ವಿನೋದ್‌ ಕುಮಾರ್‌ ನಿರ್ಮಾಣ ಮಾಡುತ್ತಿದ್ದು ಗುರುದತ್ತ ಗಾಣಿಗ ಹಾಗೂ ಕಿಶೋರ್‌ ಕುಮಾರ್‌ ಸಹ ನಿರ್ಮಾಪಕರಾಗಿದ್ದಾರೆ..ಸದ್ಯ ಬಹುತೇಕ ಚಿತ್ರೀಕರಣ ಕಂಪ್ಲೀಟ್‌ ಮಾಡಿರೋ ವೈಲ್ಡ್‌ ಟೈಗರ್‌ ಸಫಾರಿ ಸಿನಿಮಾ ತಂಡ ಶೀಘ್ರದಲ್ಲೇ ಚಿತ್ರೀಕರಣ ಕಂಪ್ಲೀಟ್‌ ಮಾಡಿ ತೆರೆಗೆ ಬರಲಿದ್ದಾರೆ….

Spread the love
Click to comment

Copyright © 2019 PopcornKannada.com