Cinema News

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಬಾಲಿವುಡ್ ನಟಿ ಶೆನಾಜ್ ಟ್ರೆಜರಿ

Published

on

ಬಣ್ಣದ ಬದುಕಿನ ಮಂದಿ ಅಂದರೆ ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಯಾವುದೇ ತೊಂದರೆ ಇರಲ್ಲ. ಹೆಲ್ತಿ ಆಗಿ ಇರ್ತಾರೆ ಅಂಥ ಅಂದುಕೊಳ್ಳೋರೆ ಸಾಕಷ್ಟು ಮಂದಿ. ಆದರೆ ಇತ್ತೀಚೆಗೆ ಸಾಕಷ್ಟು ಮಂದಿ ತಮ್ಮ ಆರೋಗ್ಯದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ತಿರ್ತಾರೆ. ಇದೀಗ ಬಾಲಿವುಡ್ ನಟಿ ಶೆನಾಜ್ ಟ್ರೆಜರಿ ತಮಗಿರುವ ವಿಚಿತ್ರ ಕಾಯಿಲೆಯೊಂದರ ಬಗ್ಗೆ ಹೇಳಿಕೊಂಡಿದ್ದಾರೆ.
2003ರಲ್ಲಿ ಶಾಹಿದ್ ಕಪೂರ್ ನಟನೆಯ ‘ಇಷ್ಕ್ ವಿಷ್ಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟ ನಟಿ ಶೆನಾಜ್ ಟ್ರೆಜರಿ ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾಯಿಲೆಯೊಂದಕ್ಕೆ ತುತ್ತಾಗಿದ್ದಾರೆ. ಈ ಕುರಿತು ಸ್ವತಃ ಶೆನಾಜ್ ಟ್ರೆಜರಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದು, ನಾನು ‘ಪ್ರೊಸೊಪಾಗ್ನೋಸಿಯಾ’ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಅನಾರೋಗ್ಯವನ್ನು ಅಭಿಮಾನಿಗಳಿಗೆ ವಿವರಿಸಿರುವ ಶೆನಾಜ್ ಟ್ರೆಜರಿ, “ನಾನು ಪ್ರೊಸೊಪಾಗ್ನೋಸಿಯಾ ಬಗ್ಗೆ ತಿಳಿದುಕೊಂಡಿದ್ದೇನೆ. ನಾನು ಎಲ್ಲಾ ಮುಖಗಳನ್ನು ಏಕೆ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಈಗ ಅರ್ಥವಾಗಿದೆ. ಇದೊಂದು ಅಸ್ವಸ್ಥತೆ. ಇದನ್ನು ಮುಖ ಕುರುಡುತನ ಎಂದೂ ಕರೆಯುತ್ತಾರೆ. ಇದರರ್ಥ ನೀವು ಜನರ ಮುಖಗಳನ್ನು ಗುರುತಿಸುವುದಿಲ್ಲ. ಅವಳ ಮುಖವನ್ನೂ ಗುರುತಿಸುವುದಿಲ್ಲ ಆದರೆ ಧ್ವನಿಗಳನ್ನು ಗುರುತಿಸು ಸಾಮರ್ಥ್ಯವಿದೆ‘ ಎಂದು ಅವರು ಹೇಳಿದ್ದಾರೆ.

 

 

 

ಪ್ರೊಸೊಪಾಗ್ನೋಸಿಯಾದ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿಸಿದ್ದು, “ಈ ಕಾಯಿಲೆಯಿಂದ ಬಳಲುತ್ತಿರುವ ನಂತರ, ಜನರು ತಮ್ಮ ಆಪ್ತ ಸ್ನೇಹಿತರು ಅಥವಾ ಕುಟುಂಬದ ಮುಖಗಳನ್ನು ಗುರುತಿಸುವುದಿಲ್ಲ. ಹೌದು ಇದು ನಾನೇ. ಅವರನ್ನು ನೆನಪಿಸಿಕೊಳ್ಳಲು ನನಗೆ ಕೆಲವು ನಿಮಿಷಗಳು ಬೇಕಾಗುತ್ತವೆ. ಟಿವಿ ಅಥವಾ ಚಲನಚಿತ್ರಗಳ ಪಾತ್ರಗಳು ಒಂದೇ ರೀತಿ ನೋಡಿದರೂ ಅವರನ್ನು ಗುರುತಿಸುವುದಿಲ್ಲ‘ ಎಂದು ನಟಿ ಬಹಿರಂಗಪಡಿಸಿದ್ದಾರೆ. ಇದು ಮೆದುಳಿನ ಸಮಸ್ಯೆ ಎಂದು ಹೇಳಿದ್ದಾರೆ.
ಇದು ಅಪರೂಪದಲ್ಲೇ ಅಪರೂಪದ ಕಾಯಿಲೆಯಾಗಿದ್ದು, ಸುಮಾರು 50 ಜನರಲ್ಲಿ ಒಬ್ಬರು ಈ ವಿಚಿತ್ರ ಕಾಯಿಲೆಯ ವಿವಿಧ ಹಂತಗಳಲ್ಲಿ ಬಳಲುತ್ತಿದ್ದಾರೆಂದು ನಂಬಲಾಗಿದೆ. ವೈದ್ಯರು ಕೂಡ ಈ ಸ್ಥಿತಿಯ ಬಗ್ಗೆ ವಿರಳ ಮಾಹಿತಿ ಹೊಂದಿದ್ದಾರೆ. ಆದರೆ ಇದು ಜನ್ಮದತ್ತವಾಗಿ ಅಥವಾ ಮೆದುಳಿನ ಒಂದು ಭಾಗದಲ್ಲಿನ ಹಾನಿಯಿಂದ ಉಂಟಾಗುತ್ತದೆ ಎಂದು ವೈದ್ಯಲೋಕ ತಿಳಿಸಿದೆ.

Spread the love
Click to comment

Copyright © 2019 PopcornKannada.com