Cinema News
ನೃತ್ಯ ನಿರ್ದೇಶಕಿಯಾದ ನಟಿ ಭಾವನಾ
ಗಾಳಿಪಟ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಭಾವನಾ ರಾವ್, ವರ್ಸಟೈಲ್ ನಟಿ ಎಂದು ಹೆಸರು ಮಾಡಿದರು, ಕನ್ನಡ ಮಾತ್ರವಲ್ಲದೆ ಹಿಂದಿ ಚಿತ್ರರಂಗಕ್ಕೂ ಅವರು ಎಂಟ್ರಿ ಕೊಟ್ಟಿದ್ದು, ಅದರ ಚಿತ್ರೀಕರಣ ನಡೆಯುತ್ತಿದೆ. ಇದಲ್ಲದರ ಜತೆ ಈಗ ಅವರು ಕೋರಿಯೋಗ್ರಫರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.
ಹೌದು ವಿಜಯಲಕ್ಷ್ಮಿ ಸಿಂಗ್ ನಿರ್ದೇಶನ ಮಾಡಿರುವ ಯಾನ ಚಿತ್ರದಲ್ಲಿ ಒಂದು ಹಾಡಿಗೆ ನಟಿ ಭಾವನಾ ರಾವ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಭಾವನಾ ರಾವ್ ಮೂಲತಃ ನೃತ್ಯಗಾರ್ತಿ, ಹಾಗಾಗಿ ಅವರಿಗೆ ಡಾನ್ಸ್ ಚೆನ್ನಾಗಿ ಗೊತ್ತು. ಇನ್ನು ಯಾನ ಸಿನಿಮಾದಲ್ಲಿ ಜೈಜಗದೀಶ್ ಮತ್ತುವಿಜಯಲಕ್ಷ್ಮಿ ಸಿಂಗ್ ಅವರ ಮೂವರು ಪುತ್ರಿಯರು ನಟಿಸಿದ್ದು, ಇದು ಅವರ ಲಾಂಚಿಂಗ್ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಒಂದು ರೊಮ್ಯಾಂಟಿಕ್ ಹಾಡಿಗೆ ಭಾವನಾ ಕೊರಿಯೋಗ್ರಫ್ ಮಾಡಿದ್ದಾರೆ.
ಇಷ್ಟು ದಿನ ತನ್ನ ನಟನೆಯಿಂದ ಗಮನ ಸೆಳೆದಿದ್ದ ಈ ನಟಿ ಈಗ ನೃತ್ಯ ನಿರ್ದೇಶನ ಕೂಡಾ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅವರು ನೃತ್ಯ ನಿರ್ದೇಶನವನ್ನು ಮುಂದುವರೆಸಿಕೊಂಡು ಹೋಗುತ್ತಾರಾ ನೋಡಬೇಕಿದೆ.
ಇನ್ನು ಭಾವನಾ ರಾವ್ ಕೊರಿಯೋಗ್ರಫಿ ಮಾಡಿರುವ ಹಾಡು ಬಹಳ ಚೆನ್ನಾಗಿಮೂಡಿ ಬಂದಿದೆ, ಅವರು ಪ್ರೊಫೆಶನಲ್ ನೃತ್ಯ ನಿರ್ದೇಶಕರ ರೀತಿ ಮಾಡಿದ್ದಾರೆ ಎಂದು ಇಡೀ ಚಿತ್ರತಂಡ ಹೇಳಿತು.