Cinema News
ಜಮೀರ್ ಪುತ್ರನ ಸಿನಿಮಾಗೆ ‘ಬನಾರಸ್’ ಟೈಟಲ್
ಬೆಲ್ ಬಾಟಮ್, ಬ್ಯೂಟಿಫುಲ್ ಮನಸುಗಳು ಸಿನಿಮಾ ಖ್ಯಾತಿಯ ಜಯತೀರ್ಥ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು ಅದಕ್ಕೆ ಮಾಜಿ ಸಚಿವ ಜಮೀರ್ ಅಹಮದ್ ಪುತ್ರ ಜಹೇದ್ ಖಾನ್ ನಾಯಕ.
ಜಹೇದ್ ಖಾನ್‌ಗೆ ಪಂಚತಂತ್ರ ಸಿನಿಮಾದ ಸೋನಲ್ ಮಂಥೆರೋ ನಾಯಕಿಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ‘ಬನಾರಸ್’ ಎಂದು ಹೆಸರಿಟ್ಟಿದ್ದಾರೆ ಜಯತೀರ್ಥ.
ಆಗಸ್ಟ್ ಕೊನೇ ವಾರದಲ್ಲಿ ಸೆಟ್ಟೇರಲಿರುವ ಈ ಸಿನಿಮಾದಲ್ಲಿ ಜಹೇದ್ ವಿಭಿನ್ನ ಪಾತ್ರ ಇದ್ದು, ಅದಕ್ಕಾಗಿ ಅವರು ಈಗಾಗಲೇ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಬನಾರಸ್, ಕಾಶಿ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ.