Cinema News

“ಬಲರಾಮನ ದಿನಗಳು” ಟೀಸರ್ ಲಾಂಚ್ – ಹೊಸ ಕುತೂಹಲ ಮೂಡಿಸಿದ ಚಿತ್ರ

Published

on

“ಬಲರಾಮನ ದಿನಗಳು” ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳಿಂದಲೇ ಗಮನ ಸೆಳೆದಿದ್ದ ಈ ಸಿನಿಮಾ ಇದೀಗ ಟೀಸರ್ ಮೂಲಕ ಇನ್ನಷ್ಟು ಕುತೂಹಲ ಹುಟ್ಟಿಸಿದೆ. ಉದ್ಯಮದಲ್ಲಿಯೂ, ಪ್ರೇಕ್ಷಕರಲ್ಲಿಯೂ ಚಿತ್ರದ ಬಗ್ಗೆ ಹೊಸ ನಿರೀಕ್ಷೆ ಮೂಡಿದೆ. ಟೀಸರ್‌ನಲ್ಲಿ ವಿನೋದ್ ಪ್ರಭಾಕರ್ ಅವರ ವಿಭಿನ್ನ ಲುಕ್ ಮತ್ತು ಡಾನ್ಸ್ ಎಲ್ಲರ ಮೆಚ್ಚುಗೆ ಪಡೆದಿವೆ.

 

“ಮಾದೇವ” ಚಿತ್ರದ ನಂತರ ವಿನೋದ್ ಪ್ರಭಾಕರ್ ಹೊಸ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕೇವಲ ಆಕ್ಷನ್‌ಗೆ ಸೀಮಿತವಾಗದೇ ಪ್ರಯೋಗಾತ್ಮಕ ಕಥೆಗಳಲ್ಲೂ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಈ ಚಿತ್ರವೂ ಅದಕ್ಕೆ ಉದಾಹರಣೆಯಾಗಿದ್ದು, ಭರ್ಜರಿಯಾಗಿ ನಡೆದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಅವರು ತಮ್ಮ ಸಂತೋಷವನ್ನು ಹಂಚಿಕೊಂಡರು.

 

 

 

 

 

 

 

ಚಿತ್ರದ ನಿರ್ಮಾಪಕಿ ಪದ್ಮಾವತಿ ಸ್ವತಃ ವೇದಿಕೆಯ ಮೇಲೆ ಟೀಸರ್ ಬಿಡುಗಡೆ ಮಾಡಿದ್ದು, ನಿರ್ಮಾಣದ ವೇಳೆ ಕುಟುಂಬದ ಬೆಂಬಲದ ಬಗ್ಗೆ ಮಾತನಾಡಿದರು. ತಮ್ಮ ಪುತ್ರ ಶ್ರೇಯಸ್ ಹಾಗೂ ಕುಟುಂಬದ ಸಹಕಾರವನ್ನು ಮೆಚ್ಚಿಕೊಂಡ ಅವರು, ವಿನೋದ್ ಪ್ರಭಾಕರ್ ಮತ್ತು ನಿರ್ದೇಶಕ ಕೆ.ಎಂ ಚೈತನ್ಯ ಚಿತ್ರದ ಶಕ್ತಿಯಾಗಿದೆ ಎಂದರು. ವಿಶೇಷವೆಂದರೆ, ಅವರು ನಿರ್ಮಾಣದ ಜೊತೆಗೆ ಚಿತ್ರದಲ್ಲೂ ಒಂದು ಪಾತ್ರ ನಿರ್ವಹಿಸಿದ್ದಾರೆ.

 

 

 

 

 

ಈ ಚಿತ್ರವು 80ರ ದಶಕದ ಹಿನ್ನೆಲೆಯ ಕಥೆಯನ್ನು ಹೇಳುತ್ತದೆ. ನಿರ್ದೇಶಕ ಚೈತನ್ಯ ತಮ್ಮ ತಂಡವನ್ನು ಪರಿಚಯಿಸಿ ಅವರ ಶ್ರಮವನ್ನು ಕೊಂಡಾಡಿದರು. ನಟರು ಮತ್ತು ತಾಂತ್ರಿಕರು ತಮ್ಮ ಪಾತ್ರಗಳು ಹಾಗೂ ಅನುಭವಗಳ ಬಗ್ಗೆ ಹಂಚಿಕೊಂಡರು. ಹಲವು ಖ್ಯಾತ ನಟರು ಮತ್ತು ಹೊಸ ಪ್ರತಿಭೆಗಳು ಸೇರಿಕೊಂಡಿರುವ ಈ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Spread the love

Copyright © 2019 PopcornKannada.com