Cinema News

‘ಗೀಕ್’ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬೆಂಬಲ; ಪೋಸ್ಟರ್ ಅನಾವರಣ

Published

on

ಟೈಟಲ್ ಹಾಗೂ ಟೀಸರ್ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿರುವ ‘ಗೀಕ್’ ಚಿತ್ರಕ್ಕೆ ಇದೀಗ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಹೊಸ ಪೋಸ್ಟರ್ ಅನಾವರಣಗೊಳಿಸಿ, ಚಿತ್ರತಂಡದ ಶ್ರಮ ಹಾಗೂ ಸೃಜನಶೀಲತೆಯನ್ನು ಮೆಚ್ಚಿ ಶುಭ ಹಾರೈಸಿದ್ದಾರೆ. ಇದರಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

 

ಯುವ ನಿರ್ದೇಶಕ ಡಿ. ಹರಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್ ಹಾಗೂ ವಿರಾನಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಮೊದಲ ಝಲಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಂಟೆಂಟ್ ಆಧಾರಿತ ಸಿನಿಮಾವಾಗಲಿದೆ ಎಂಬ ಅಭಿಪ್ರಾಯ ಸಿನಿರಸಿಕರಲ್ಲಿ ಮೂಡಿದೆ.

 

 

 

 

 

ಎಸ್.ವಿ.ಎಂ ಪ್ರೊಡಕ್ಷನ್ಸ್ ಮತ್ತು ಹರಿಪ್ರಕಾಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ನಾಗರಾಜ್ ಹಾಗೂ ಪ್ರಿಯಾಂಕಾ ನಿರ್ಮಿಸಿರುವ ಈ ಚಿತ್ರವು ಗುಣಮಟ್ಟದ ಕಥೆ ಹೇಳುವ ಉದ್ದೇಶದಿಂದ ರೂಪುಗೊಂಡಿದೆ. ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾ ನೀಡಬೇಕು ಎಂಬ ಉತ್ಸಾಹದೊಂದಿಗೆ ನಿರ್ಮಾಪಕದ್ವಯರು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.

 

 

 

 

 

 

ಮೊಬೈಲ್ ಆ್ಯಪ್‌ಗಳು ಮತ್ತು ವೈಯಕ್ತಿಕ ಡೇಟಾದ ದುರುಪಯೋಗವನ್ನು ಹಿನ್ನೆಲೆಯಾಗಿ ಹೊಂದಿರುವ ‘ಗೀಕ್’ ಚಿತ್ರದಲ್ಲಿ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ, ಜೋ ಕೋಸ್ಟಾ ಅವರ ಸಂಗೀತ, ಶಶಾಂಕ್ ನಾರಾಯಣ್ ಅವರ ಸಂಕಲನ ಸೇರಿದಂತೆ ಅನುಭವಿ ತಂತ್ರಜ್ಞರ ತಂಡ ಚಿತ್ರದ ತಾಂತ್ರಿಕ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

Spread the love

Copyright © 2019 PopcornKannada.com