Cinema News

ಪೈಲ್ವಾನ್‌ ಜತೆ ಪವರ್‌ ಸ್ಟಾರ್

Published

on

ಸುದೀಪ್‌ ನಟನೆಯ ಪೈಲ್ವಾನ್‌ ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾದ ಆಡಿಯೋ ಇದೇ ವರಮಹಾಲಕ್ಷ್ಮೀ ಹಬ್ಬದಂದು ರಿಲೀಸ್‌ ಆಗಲಿದ್ದು, ಅದಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

 

 

ಈಗ ಬಿಡುಗಡೆಯಾಗಿರುವ ಟೀಸರ್‌, ಸ್ಟಿಲ್‌ಗಳ ಮೂಲಕ ಸೆನ್ಸೇಶನ್‌ ಕ್ರಿಯೇಟ್‌ ಮಾಡಿರುವ ಪೈಲ್ವಾನ್‌ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪುನೀತ್‌ ಸುದೀಪ್‌ ಅವರಿಗೆ ಸಾಥ್‌ ನೀಡಲಿದ್ದಾರೆ. ಅಲ್ಲಿಗೆ ಪೈಲ್ವಾನ್‌ ಪವರ್‌ ಮತ್ತಷ್ಟು ಹೆಚ್ಚಾದಂತೆ ಆಗಿದೆ.

 

 

ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾದಲ್ಲಿ ಸುದೀಪ್‌ ಮೊದಲ ಬಾರಿಗೆ ಪೈಲ್ವಾನ್‌ ಪಾತ್ರದಲ್ಲಿದ್ದಾರೆ. ಸೆಪ್ಟಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಕಬೀರ್‌ ಸಿಂಗ್‌ ದುಹಾನ್‌, ಆಕಾಂಕ್ಷ ಸಿಂಗ್‌, ಸುನೀಲ್‌ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ.

Spread the love
Click to comment

Copyright © 2019 PopcornKannada.com