Cinema News

ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಅಪ್ಪು ನಟನೆ

Published

on

ಕವಲುದಾರಿ ಮೂಲಕ ಈಗಾಗಲೇ ಯಶಸ್ವಿ ನಿರ್ಮಾಪಕ ಎನಿಸಿಕೊಂಡಿರುವ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರದ್ದೇ ಪಿ ಆರ್‌ ಕೆ ಪ್ರೊಡಕ್ಷನ್‌ ಹೌಸ್‌ ನಿಂದ ನಿರ್ಮಾಣವಾಗುವ ಸಿನಿಮಾದಲ್ಲಿ ಸದ್ಯದಲ್ಲೇ ನಟಿಸುತ್ತಾರಂತೆ.

 

ಪಾಪ್‌ಕಾರ್ನ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪಿಆರ್‌ಕೆಯ 5 ಅಥವಾ 6ನೇ ಸಿನಿಮಾದಲ್ಲಿ ಅಪ್ಪು ಅವರೇ ನಾಯಕರಾಗಿರುತ್ತಾರಂತೆ. ಇತ್ತೀಚೆಗೆ ನಡೆದ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಪ್ರೆಸ್‌ ಮೀಟ್‌ನಲ್ಲಿ ಆದಷ್ಟು ಬೇಗ ನನ್ನ ಪ್ರೊಡಕ್ಷನ್‌ ಹೌಸ್‌ನಲ್ಲಿ ನಾನು ನಟಿಸುತ್ತೇನೆ ಎಂದರು ಹೇಳಿದರು.

 

ಇದೇ ಸಮಯದಲ್ಲಿ ಪತ್ರಕರ್ತರು ವಿತರಣಾ ಕ್ಷೇತ್ರಕ್ಕೆ ಯಾವಾಗ ಎಂಟ್ರಿ ಕೊಡುತ್ತೀರಾ ಎಂದಾಗ, ಅದನ್ನು ಸಹ ಅಂದುಕೊಂಡಿದ್ದೇನೆ ಸದ್ಯದಲ್ಲೇ ಆ ಕೆಲಸಕ್ಕೂ ನಾನು ಕೈ ಇಡುತ್ತೇನೆ ಎಂದರು. ಒಟ್ಟಿನಲ್ಲಿ ಪುನೀತ್‌ ಅವರ ಬ್ಯಾನರ್‌ನಲ್ಲಿ ಪುನೀತ್‌ ನಾಯಕರಾಗಿರುವ ಸಿನಿಮಾ ಸದ್ಯದಲ್ಲೇ ಆರಂಭವಾಗಲಿದೆ.

Spread the love
Click to comment

Copyright © 2019 PopcornKannada.com