Cinema News
‘ಗೀತಾ’ಗಾಗಿ ಹಾಡಿದ ಅಪ್ಪು..!!!!
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತಾ ಸಿನಿಮಾಗಾಗಿ ನಟ ಪವರ್ ಸ್ಟಾರ್ ಪುನೀತ್‌ರಾಜ್ಕುಮಾರ್ ಒಂದು ಹಾಡನ್ನು ಹಾಡಿದ್ದಾರೆ. ಗೀತಾ ಸಿನಿಮಾದಲ್ಲಿ ಕನ್ನಡ ಹೋರಾಟಗಾರರ ಕಥೆ ಇದ್ದು, ಆ ಸಮಯದಲ್ಲಿ ಬರುವ ಹಾಡನ್ನು ಪುನೀತ್ ಹಾಡಿದ್ದಾರೆ.
ಬಿಡುಗಡೆಯಾಗಿರುವ ಟೀಸರ್ ಮತ್ತು ಫಸ್ಟ್ ಲುಕ್ ಮೂಲಕ ಗೀತಾ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ವಿಜಯ್ ನಾಗೇಂದ್ರ ಹಿಂದೆ ಸಂತೊಷ್ ಆನಂದ್‌ರಾಮ್ ಜತೆ ಕೆಲಸ ಮಾಡುತ್ತಿದ್ದಾರೆ.
ಪುನೀತ್ ಗೀತಾಗಾಗಿ ‘ಕನ್ನಡವೇ ಸತ್ಯ’ ಎಂಬ ಹಾಡನ್ನು ಹಾಡಿದ್ದಾರೆ. ಕನ್ನಡದ ಹೋರಾಟದಲ್ಲಿ ಜಾಗೃತಿ ಮೂಡಿಸೋ ಹಾಡು ಇದಾಗಿದೆ. ವಿಶೇಷ ಎಂದರೆ ಈ ಹಾಡನ್ನು ಬರೆದಿರುವುದು ಸಂತೋಷ್ ಆನಂದ್‌ರಾಮ್. ಈ ಹಾಡನ್ನು ನಟ ಗಣೇಶ್ ಕನ್ನಡಿಗರಿಗಾಗಿ ಅರ್ಪಿಸಿದ್ದಾರೆ. ಈ ಹಾಡು ಇದೇ ಗುರುವಾರ ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ಗೋಕಾಕ್ ಚಳುವಳಿಯ ಪ್ರಸ್ತಾಪವೂ ಇದೆಯಂತೆ. ಸಿನಿಮಾ ಇದೇ ಸೆ.27ಕ್ಕೆ ಬಿಡುಗಡೆಯಾಗಲಿದೆ.