Cinema News
ವಿರಾಟ್‌ಗೆ ಮತ್ತೊಂದು ಚಿತ್ರ ಮಾಡ್ತಾರೆ ಎ ಪಿ ಅರ್ಜುನ್
ಎ ಪಿ ಅರ್ಜುನ್ ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದ ಕಿಸ್ ಚಿತ್ರ ಈಗಾಗಲೇ 50 ದಿನ ಪೂರೈಸಿದ್ದು, ಅದೇ ಖುಷಿಯಲ್ಲಿ ಕಿಸ್ ಸಿನಿಮಾದ ನಾಯಕ ವಿರಾಟ್ ಮತ್ತೊಂದು ಚಿತ್ರ ಮಾಡಲಿದ್ದಾರಂತೆ ನಿರ್ದೇಶಕ ಎ ಪಿ ಅರ್ಜುನ್ .
ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದ ಕಿಸ್ ಎಲ್ಲಡೆ ಉತ್ತಮ ಪ್ರದರ್ಶನ ಕಂಡು, ಹಿಟ್ ಸಾಲಿಗೆ ಸೇರಿದೆ. ಈ ಸಿನಿಮಾದಲ್ಲಿ ವಿರಾಟ್‌ರ ಡಾನ್ಸ್, ಫೈಟ್, ನಟನೆ ಕಂಡು ಸಾಕಷ್ಟು ಮಂದಿ ಅಭಿಮಾನಿಗಳಾಗಿದ್ದಾರೆ. ಹಾಗಾಗಿ ವಿರಾಟ್‌ರನ್ನೇ ತಮ್ಮ ಮುಂದಿನ ಚಿತ್ರಕ್ಕೆ ಅರ್ಜುನ್ ಆಯ್ಕೆ ಮಾಡಿಕೊಂಡಿದ್ದಾರೆ.
ಈಗಾಗಲೇ ಕಥೆಯೊಂದನ್ನು ಅರ್ಜುನ್ ಬರೆದಿದ್ದು, ಅದಕ್ಕೆ ವಿರಾಟ್ ಪಕ್ಕಾ ಸೂಟ್ ಆಗುತ್ತಾರಂತೆ. ಈ ಬಗ್ಗೆ ಅರ್ಜುನ್ ಆಗಲಿ, ವಿರಾಟ್ ಆಗಲಿ ಕನ್ಫರ್ಮ್ ಮಾಡದೇ ಇದ್ದರೂ, ವಿರಾಟ್‌ಗೆ ಅರ್ಜುನ್ ಸಿನಿಮಾ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ. ಅಲ್ಲಿಗೆ ಕಿಸ್ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವುದು ಪಕ್ಕಾ.