Cinema News

ಅನಂತ ಕಾಲಂ : ಮೈನಡುಗಿಸುತ್ತಿದೆ ಟೀಸರ್.. ಕಥೆಯನ್ನ ನೀವೊಮ್ಮೆ ಊಹಿಸಬಹುದಾ..?

Published

on

ಟೀಸರ್, ಟ್ರೇಲರ್ ಸಿನಿ ಪ್ರೇಮಿಗಳಿಗೆ ಥಿಯೇಟರ್ ಆಹ್ವಾನ ಕೊಡುವ ಪತ್ರಿಕೆ ಇದ್ದಂತೆ. ಅಲ್ಲಿ ಸಿನಿಮಾ ತಂಡದವರಿಂದ ಮೃಷ್ಟಾನ್ನ ಭೋಜನದ ಸಿಹಿಯ ಸೂಕ್ಷ್ಮತೆ ಸಿಕ್ಕರೆ ಖಂಡಿತ ಥಿಯೇಟರ್ ಗೆ ಜನ ಮಿಸ್ ಮಾಡದೆ ಹೋಗ್ತಾರೆ. ಈ ಮಾತನ್ನ ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಅನಂತ ಕಾಲಂ ಟೀಸರ್ ನೋಡಿದ ಕಾರಣಕ್ಕೆ.

 

 

ಸಿನಿಮಾ ವಿಚಾರದಲ್ಲಿ ಒಂದಷ್ಟು ಜಾನರ್ ಗಳು ಇದಾವೆ ಅದರಲ್ಲಿ ಒಂದೊಂದು ಜಾನರ್ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಅದರಲ್ಲೂ ಹಾರಾರ್, ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಇಷ್ಟ ಪಡುವವರು ಹೆಚ್ಚಾಗಿದ್ದಾರೆ. ಅನಂತ ಕಾಲಂ ಸಿನಿಮಾ ಹಾರಾರ್ ಅಂತ ಹೇಳೋದಕ್ಕೆ ಆಗಲ್ಲ. ಆದ್ರೆ ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್ ಅನ್ನೋದನ್ನ ಊಹೆ ಮಾಡಬಹುದು. ಹಾಗಂತ ಅಂತಿಥ ಸಸ್ಪೆನ್ಸ್, ಥ್ರಿಲ್ಲರ್ ಅಲ್ಲ, ನಿಜಕ್ಕೂ ಥ್ರಿಲ್ಲಿಂಗ್ ಆಗಿನೆ ಇದೆ. ಒಮ್ಮೆ ಈ ಟೀಸರ್ ಅನ್ನ ನೀವೂ ನೋಡಿದ್ರೆ ನಿಮ್ಮ ಎದೆ ನಡುಗದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಮನಸ್ಸೊಳಗೆ ಆ ದೃಶ್ಯಗಳೇ ಕೆಲ ಸೆಕೆಂಡ್ ಗಳು ಆವರಿಸಿ ಬಿಡುತ್ತವೆ.

 

 

ಟೀಸರ್ ಶುರುವಾಗುವುದು ಒಂದು ಸಿಗರೇಟ್ ಮ್ಯಾಟರ್ ನಿಂದ. ಪೊಲೀಸ್ ಬಂದ್ರು ಅಂತ ಎಲ್ಲ ಓಡುವಾಗ, ಅವನೊಬ್ಬ ಮೆಸ್ ಒಳಗಡೆ ನೋಡುತ್ತಾ ಸಿಗರೇಟ್ ಸೇದುತ್ತಾ ಇರುತ್ತಾನೆ. ಆದರೆ ಹಿಂದೆ ಯಾವುದೋ ಫೋಟೋ ಒಂದು ಸುಟ್ಟು ಕರಕಲಾಗುತ್ತಿರುತ್ತದೆ. ಸಿಗರೇಟ್ ಮುಗಿದ ಮೇಲೆ ಯಾರೋ ಕರೆದಂತೆ ಭಾಸವಾಗುತ್ತದೆ. ನೋಡಿದರೆ ಯಾರಿಲ್ಲ. ಮತ್ತದೆ ಧ್ವನಿ, ಬಲೂನ್ ತಗೋ ಎಂಬ ವ್ಯಾಘ್ರ ಧ್ವನಿ. ತೆಗೆದುಕೊಳ್ಳಲು ನಿರಾಕರಿಸಿದಾಗ ಭಯಗೊಳಿಸಿದ ಧ್ವನಿಯದು. ಹೆದರಿದ ಹೀರೋ ಬಲೂನ್ ತೆಗೆದುಕೊಂಡರೆ ನಿನ್ನ ಸಾವು ಈಗಲೇ ಬರುತ್ತೆ ಅನ್ನೋದಾ..? ಹಿಂದೆ ತಿರುಗಿ ನೋಡಿದರೆ ಆಕ್ಸಿಡೆಂಟ್ ಆಗಿಯೇ ಬಿಡುತ್ತೆ. ಅಯ್ಯಯ್ಯೋ ಇದೇನಾಯ್ತು ಎಂದುಕೊಳ್ಳುವಾಗಲೇ ಸ್ಟೋರಿ ಉಲ್ಟಾ ಆಗುತ್ತೆ. ಅದು ಅದೊಂದು ಹೊಳೆಯುವ ಖಡ್ಗದಿಂದ. ಟೀಸರ್ ಎಷ್ಟು ಭಯಗೊಳಿಸುವಂತೆ ಇದೆ ಅನ್ನೋದನ್ನ ಟೀಸರ್ ನಲ್ಲಿಯೇ ನೋಡಬೇಕು.

 

 

ಈ ಕುತೂಹಲವಾದ ಕಥೆಗೆ ಆಕ್ಷನ್ ಕಟ್ ಹೇಳಿರುವ ವಿಜಯ್ ಮಂಜುನಾಥ್, ವಿಭಿನ್ನವಾದ ಪಾತ್ರದ ಮೂಲಕ ಪೃಥ್ವಿರಾಜ್ ಶೆಟ್ಟಿಯನ್ನು ಪರಿಚಯ ಮಾಡುತ್ತಿದ್ದಾರೆ. ವ ವಿಲಿಯಂಟ್ ವಿಷನ್ ಕ್ರಿಯೇಷನ್ಸ್ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಉಳಿದಂತೆ ಗುರುಪ್ರಸಾದ್ ನರ್ನಾಡ್ – ಛಾಯಾಗ್ರಾಹಣ, ಭುವನ್ ಶಂಕರ್ ಮತ್ತು ಸನ್ಸ್ ಕಾರ್ – ಸಂಗೀತ, , ವೆಂಕಟ್ ಪಿ.ಎಸ್ – ಕಥೆ ಬರೆದಿದ್ದಾರೆ.

 

Spread the love
Click to comment

Copyright © 2019 PopcornKannada.com