Cinema News

“ರಾಮರಸ” ಚಿತ್ರದಲ್ಲಿ “ಅಧ್ಯಕ್ಷ” ನಟಿ ಹೆಬ್ಬಾ ಪಟೇಲ್ .

Published

on

ಹೆಬ್ಬಾ ಪಟೇಲ್ ಅವರು ಭಾರತೀಯ ಚಲನಚಿತ್ರ ರಂಗದ ಹೆಸರಾಂತ ನಟಿಯರಲ್ಲಿ ಒಬ್ಬರು. ಕನ್ನಡ ಚಿತ್ರರಂಗದಿಂದ ನಟನೆಯನ್ನ ಶುರು ಮಾಡಿ ಹತ್ತು ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಮೊದಲ ಚಿತ್ರ ಕನ್ನಡದ ಹೆಸರಾಂತ ಚಿತ್ರವಾದ “ಅಧ್ಯಕ್ಷ” ಚಿತ್ರದಲ್ಲಿ ಶರಣ್ ಅವರ ಜೊತೆ ನಟಿಸಿ ಕನ್ನಡ ಪ್ರೆಕ್ಷಕರ ಮನಸ್ಸನ್ನು ಮುಟ್ಟಿ ಕನ್ನಡದ ಮನೆಮಗಳಾದರು. ನಂತರ ತೆಲುಗಿನಲ್ಲಿ ‘ಕುಮಾರಿ 21F” ಚಿತ್ರ ಇವರಿಗೆ ಖ್ಯಾತಿಯನ್ನ ತಂದು ಕೊಟ್ಟಿತು. ಇವರು , ಸದ್ಯಕ್ಕೆ ಗುರು ದೇಶಪಾಂಡೆ ಅವರ ನಿರ್ಮಾಣದ ಜಿ ಸಿನಿಮಾಸ್ ಹಾಗೂ ಸೆವೆನ್ ಸ್ಟಾರ್ ಸ್ಟುಡಿಯೋ ಮತ್ತು ಬಿ.ಎಂ ಗಿರಿರಾಜ್ ಅವರ ನಿರ್ದೇಶನದ “ರಾಮರಸ” ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಿಕರಣ ಮುಗಿಸಿರುವ “ರಾಮರಸ” ಚಿತ್ರತಂಡ ಸದ್ಯ ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಅವಳ‌ ಅಂದಕ್ಕೆ ಸೋತವರು
ಮಾತಿಗೆ ಮರುಳಾದವರು
ನಡಿಗೆಗೆ ನಡುಗಿದವರಾರೂ
ಭೂಮಿ‌ ಮೇಲೆ ಉಳಿದೇ ಇಲ್ಲ.

ಗಂಡಸರ ಆಸೆಗೆ ಅವಳು ಒಂದು ಮಿಸ್ಟರಿ.. ಅವಳೇ ಭ್ರಮರಿ

ರಾಮರಸ ಕುಡಿಸಲು,
ನಿತ್ಯ ರತಿರಸವ ಸುರಿಸಲು,
ಪಾತಾಳ ಮೋಹಿನಿ ಭ್ರಮರಿಯಾಗಿರುವ
ಹೆಬ್ಬಾ ಪಟೇಲಳಿಗೆ ಹುಟ್ಟು ಹಬ್ಬದ ನಲ್ವಾರೈಕೆಗಳು.

Spread the love
Click to comment

Copyright © 2019 PopcornKannada.com