Cinema News
ನಟ ಹೃತಿಕ್ ರೋಷನ್ ಅಜ್ಜಿ ನಿಧನ
ಮುಂಬೈ: ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಅವರ ಅಜ್ಜಿ ಪದ್ಮರಾಣಿ ಓಂ ಪ್ರಕಾಶ್ ನಿಧನರಾಗಿದ್ದಾರೆ.
ಮುಂಬೈನ ನಿವಾಸದಲ್ಲಿ ನಿಧನರಾಗಿರುವ ಪದ್ಮರಾಣಿ ಓಂ ಪ್ರಕಾಶ್ ಅವರಿಗೆ 91 ವರ್ಷ ವಯಸ್ಸಾಗಿತ್ತು. ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಖಷಿತಪಡಿಸಿದ್ದಾರೆ. ಪದ್ಮ ರಾಣಿ ಓಂ ಪ್ರಕಾಶ್ ಅವರು ಸಿನಿಮಾ ನಿರ್ಮಾಪಕ ದಿವಂಗತ ಓಂ ಪ್ರಕಾಶ್ ಜಾ ಅವರ ಪತ್ನಿ.
ನಟ ಹೃತಿಕ್ ರೋಷನ್ ಅವರ ತಾಯಿಯ ತಾಯಿ ಆಗಿರುವ ಪದ್ಮಾ ರಾಣಿ ಓಂಪ್ರಕಾಶ್ ಗುರುವಾರ ಸಂಜೆ ಮುಂಬೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸಿಗೆ ಹಿಡಿದಿದ್ದು ಗುರುವಾರ ಸಂಜೆ ಮೃತಪಟ್ಟಿದ್ದಾರೆ.