Cinema News

ಆಸ್ಪತ್ರೆಯಿಂದ ನಟ ದಿಗಂತ್ ಡಿಸ್ಚಾರ್ಜ್: 2 ತಿಂಗಳು ಫುಲ್ ರೆಸ್ಟ್

Published

on

ಬೆಂಗಳೂರು: ಗೋವಾದಲ್ಲಿ ಸಮ್ಮರ್ ಸಾಲ್ಟ್ ಮಾಡುವ ವೇಳೆ ಕುತ್ತಿಗೆಗೆ ತೀವ್ರ ಪೆಟ್ಟಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ನಟ ದಿಗಂತ್ ಅವರನ್ನು ಬುಧವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಶಸ್ತ್ರ ಚಿಕಿತ್ಸೆಯ ಬಳಿಕ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆ ರಾತ್ರಿ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ದಿಗಂತ್ ಚೇತರಿಸಿಕೊಳ್ಳುತ್ತಿದ್ದು ವೈದ್ಯರು ಕೆಲವೊಂದು ಸೂಚನೆಗಳನ್ನ ನೀಡಿ ನೀಡಿ ಕಳುಹಿಸಿದ್ದಾರೆ.
ಇನ್ನು ಮೂರು ತಿಂಗಳು ಶೂಟಿಂಗ್ನಲ್ಲಿ ಪಾಲ್ಗೊಳ್ಳದೆ ಮನೆಯಲ್ಲೇ ರೆಸ್ಟ್ ಮಾಡುವಂತೆ ವೈದ್ಯರು ದಿಗಂತ್ ಗೆ ಸೂಚನೆ ನೀಡಿದ್ದಾರೆ.
ಘಟನೆಯ ಕುರಿತು ಮಾತನಾಡಿದ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ, ‘ರಜೆ ಆನಂದಿಸಲು ಗೋವಾಗೆ ತೆರಳಿದ್ದೆವು. ಅಲ್ಲಿ ಸಮ್ಮರ್ ಸಾಲ್ಟ್ ಮಾಡುವಾಗ ಲ್ಯಾಂಡಿಂಗ್ ತಪ್ಪಾಗಿ ಈ ಅಚಾತುರ್ಯವಾಗಿದೆ. ಗೋವಾದಲ್ಲಿದ್ದಾಗ ಬಹಳ ಟೆನ್ಶನ್ ಆಗಿತ್ತು. ಬೆಂಗಳೂರಿಗೆ ಬಂದಾಗ ಸಮಾಧಾನ ಆಯ್ತು. ಇಲ್ಲಿ ನಮ್ಮ ಕುಟುಂಬದವರು, ಸ್ನೇಹಿತರೆಲ್ಲ ಇದ್ದಾರೆ. ಗೋವಾ ಸರ್ಕಾರದವರು ನಮಗೆ ನೀಡಿದ ಬೆಂಬಲ ದೊಡ್ಡದು. ಆದ್ದರಿಂದ ಏರ್ಲಿಫ್ಟ್ ಮಾಡೋದು ಸಾಧ್ಯವಾಯ್ತು. ಇನ್ನು ಮುಂದೆ ದಿಗಂತ್ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತೇನೆ. ಸರ್ಜರಿ ಯಶಸ್ವಿಯಾಗಿದೆ. ನಾನು ಮತ್ತೆ ಸಮ್ಮರ್ ಸಾಲ್ಟ್ ಮಾಡಲು ರೆಡಿ ಆಗಿದ್ದೇನೆ ಅಂತ ದಿಗಂತ್ ವೈದ್ಯರಲ್ಲಿ ತಮಾಷೆ ಮಾಡುವಷ್ಟು ಚೇತರಿಸಿಕೊಂಡಿದ್ದಾರೆ’ ಎಂದರು.

Spread the love

Copyright © 2019 PopcornKannada.com