Cinema News

ನಟ ಅವಿನಾಶ್ ಕಾರು ಅಪಘಾತ: ಸಂಪೂರ್ಣ ನಜ್ಜುಗುಜ್ಜಾದ ಐಷಾರಾಮಿ ಕಾರು

Published

on

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಈಗಾಗ್ಲೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಕೆಜಿಎಫ್ ಮತ್ತು KGF 2 ಚಿತ್ರವು ಈಗಾಗಳೇ ಬಿಡುಗಡೆಯಾಗಿ ಎಲ್ಲಡೆ ಅಬ್ಬರಿಸಿದೆ. ಈ ಚಿತ್ರ ನಿರ್ಮಿಸಿದ ದಾಖಲೆಗಳು ಒಂದಲ್ಲಾ ಎರಡಲ್ಲಾ. ಚಿತ್ರದಲ್ಲಿ ಎಲ್ಲರ ಮೆಚ್ಚುಗೆ ಪಡೆದ ಮತ್ತೊಂದು ಪಾತ್ರ ಬಿ ಎಸ್ ಅವಿನಾಶ್. ಇದೀಗ ಇದೇ ಅವಿನಾಶ್ ಕಾರಿಗೆ ಅಪಘಾತವಾಗಿದ್ದು ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.
ಕೆಜಿಎಫ್ 1 ಮತ್ತು 2ನೇ ಭಾಗದಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದ ಆ್ಯಡ್ರೂಸ್ ಅಲಿಯಾಸ್ ಬಿಎಸ್ ಅವಿನಾಶ್ ಅವರ ಬೆನ್ಜ್ ಕಾರು ಅಫಘಾತವಾಗಿದೆ. ಅಪಘಾತದಲ್ಲಿ ನಟನ ಬೆನ್ಜ್ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.
ಇಂದು ಮುಂಜಾನೆ ನಗರ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಘಟನೆ ನಡೆದಿದ್ದು, ಮುಂಜಾನೆ ಆರು ಗಂಟೆ ಸಮಯಲ್ಲಿ ಎಂಜಿ ರಸ್ತೆ ಕಡೆ ಹೋಗುವಾಗ ಕ್ಯಾಂಟರ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ. ಅವಿನಾಶ್ ಜಿಮ್ ಗೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಅವಘಡದಲ್ಲಿ ಅವಿನಾಶ್ ಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದೆ. ಸದ್ಯ ಕ್ಯಾಂಟರ್ ಚಾಲಕ ಶಿವನಗೌಡ ಎಂಬುವವನನ್ನು ಬಂಧಿಸಲಾಗಿದ್ದು, ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Spread the love
Click to comment

Copyright © 2019 PopcornKannada.com