Cinema News
ತಮಿಳು ‘ಅರ್ಜುನ್ ರೆಡ್ಡಿ’ಯಲ್ಲಿ ಅಚ್ಯುತ್ ಕುಮಾರ್
ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಎಂದೇ ಹೆಸರು ಮಾಡಿರುವ ಅಚ್ಯುತ್ ಕುಮಾರ್ ಈಗ ಅರ್ಜುನ್ ರೆಡ್ಡಿ ಸಿನಿಮಾದ ತಮಿಳು ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡ ಅರ್ಜುನ್ ರೆಡ್ಡಿ ಎಲ್ಲ ಭಾಷೆಗಳಿಗೂ ರಿಮೇಕ್ ಆಗುತ್ತಿದೆ . ತಮಿಳಿನಲ್ಲಿ ಚಿಯಾನ್ ವಿಕ್ರಮ್ ಅವರ ಪುತ್ರ ಧ್ರುವ್ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ. ಕಳೆದವರ್ಷ ತಮಿಳಿನಲ್ಲಿ ಬಿಡುಗಡೆಯಾಗಿದ್ದ ವಿಕ್ರಂ ವೇದಾ ಸಿನಿಮಾದಲ್ಲಿ ಅಚ್ಯುತ್ ಅವರು ಪಾತ್ರ ಬಹಳ ಮೆಚ್ಚುಗೆ ಪಡೆದಿತ್ತು. ಅದಾದ ಮೇಲೆ ಅವರಿಗೆ ತಮಿಳಿನಿಂದ ಬಹಳಷ್ಟು ಆಫರ್‌ಗಳು ಬರುತ್ತಿವೆ