Movie Reviews

ಇದು ಆದಿ ಲಕ್ಷ್ಮಿಯರ ಲವ್‌ ಪುರಾಣ – ಸಿನಿಮಾ ವಿಮರ್ಶೆ – ರೇಟಿಂಗ್ – 3.5/5.

Published

on

ಚಿತ್ರ: ಆದಿಲಕ್ಷ್ಮೀ ಪುರಾಣ

ನಿರ್ದೇಶನ: ಪ್ರಿಯಾ ವಿ.

ಸಿನಿಮಾಟೋಗ್ರಫರ್‌: ಪ್ರೀತಾ.

ನಿರ್ಮಾಪಕ: ರಾಕ್‌ಲೈನ್‌ ವೆಂಕಟೇಶ್‌.

ಸಂಗೀತ: ಅನೂಪ್‌ ಭಂಡಾರಿ.

ಪಾತ್ರವರ್ಗ: ನಿರೂಪ್‌ ಭಂಡಾರಿ, ರಾದಿಕಾ ಪಂಡಿತ್‌, ಯಶ್‌ ಶೆಟ್ಟಿ, ತಾರಾ, ಸುಚೇಂದ್ರ ಪ್ರಸಾದ್‌, ಭರತ್‌, ಸೌಮ್ಯ ಜಗನ್‌ಮೂರ್ತಿ ಮತ್ತಿತರರು.

ರೇಟಿಂಗ್‌ : 3.5/5

 

ಮನುಷ್ಯನ ಬದುಕಲ್ಲಿ ಒಂದು ಸುಳ್ಳು ಏನೇನೆಲ್ಲ ಮಾಡುತ್ತದೆ, ಮತ್ತು ಅದೇ ಸುಳ್ಳು ಒಂದಿಡಿ ಸಿನಿಮಾವನ್ನು ಲವಲವಿಕೆಯಿಂದ ಕಟ್ಟುವುದಕ್ಕೆ ಸಹಾಯ ಮಾಡುತ್ತದೆ ಎಂಬುದೇ ಆದಿ ಲಕ್ಷ್ಮೀ ಪುರಾಣ.

 

 

ಇದು ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ಮತ್ತು ಸುಳ್ಳು ಹೇಳುವವರನ್ನು ಕಂಡರೆ ಉರಿದು ಬೀಳುವ ಆದಿ ಮತ್ತು ಟ್ರಾವೆಲ್‌ ಏಜೆಂಟ್‌ ಆಗಿ ಬರೀ ಸುಳ್ಳು ಹೇಳಿ ಕಂಪನಿಗೆ ಬಿಸ್ನೆಸ್‌ ತಂದುಕೊಡುವ ಲಕ್ಷ್ಮಿಯ ನಡುವೆ ನಡೆಯುವ ಪ್ರೇಮ ಪುರಾಣ. ಮೊದಲೇ ಹೇಳಿದಂತೆ ಇಡೀ ಸಿನಿಮಾಗೆ ಕಥೆಯಲ್ಲಿ ಬರುವ ಒಂದು ಸುಳ್ಳು ಮುಖ್ಯ. ಹಾಗಾಗಿ ಆ ಸುಳ್ಳು ಸಿನಿಮಾದಲ್ಲಿ ಉಂಟು ಮಾಡುವ ಸನ್ನಿವೇಶಗಳನ್ನು ನಿರ್ದೇಶಕಿ ಪ್ರಿಯಾ ಗಮನ ಸೆಳೆಯುವಂತೆ ಕಟ್ಟಿದ್ದಾರೆ.

 

ಸಿನಿಮಾವನ್ನು ಕೂರಿಸಿರುವ ಆ ಸುಳ್ಳಿನ ಕಥೆಯೇನು, ಅದರಲ್ಲಿ ರಾಧಿಕಾ ಪಂಡಿತ್‌ ಏನು ಮಾಡ್ತಾರೆ, ನಿರೂಪ್‌ ಭಂಡಾರಿಯವರ ಪಾತ್ರದ ಹಿನ್ನೆಲೆ ಏನು. ಅವರಿಬ್ಬರೂ ಲವರ್ಸ್‌ ಆಗಿರ್ತಾರಾ, ಇಲ್ಲ ಟ್ರೇಲರ್‌ನಲ್ಲಿರುವಂತೆ ರಾಧಿಕಾ ಒಂದು ಮಗುವಿನ ತಾಯಿ ಪಾತ್ರದಲ್ಲಿದ್ದಾರಾ ಇವೆಲ್ಲವನ್ನು ತಿಳಿದುಕೊಳ್ಳಲು ಮಿಸ್‌ ಮಾಡದೇ ಚಿತ್ರಮಂದಿರಕ್ಕೆ ಹೋಗಲೇಬೇಕು.

 

 

ರಂಗಿತರಂಗ ಮೂಲಕ ಗಮನ ಸೆಳೆದಿದ್ದ ನಿರೂಪ್‌ ಭಂಡಾರಿ, ಇಲ್ಲಿ ಪೊಲೀಸ್‌ ಆಫೀಸರ್‌, ಲವರ್‌ ತಾಯಿಯ ಮುದ್ದಿನ ಮಗ ಹೀಗೆ ಎಲ್ಲ ಪಾತ್ರಗಳಲ್ಲಿಯೂ ಮಿಂದೆದ್ದಿದ್ದಾರೆ. ಬಹಳ ದಿನಗಳ ನಂತರ ನಟಿಸಿರುವ ರಾಧಿಕಾ ಅವರ ಚಾರ್ಮ್‌ ಎಲ್ಲಿಯೂ ಕಮ್ಮಿ ಆಗಿಲ್ಲ. ಅವರು ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಬಹುದು ಎನ್ನುವಷ್ಟರ ಮಟ್ಟಿಗೆ ನಟಿಸಿದ್ದಾರೆ.

 

ಉಳಿದಂತೆ ತಾರಾ ಇತ್ತೀಚಿನ ಪರ್ಫೆಕ್ಟ್‌ ಮದರ್‌ ಆಗಿದ್ದಾರೆ. ಸುಚೇಂದ್ರ ಪ್ರಸಾದ್‌, ಯಶ್‌ ಶೆಟ್ಟಿ ಹೀಗೆ ಎಲ್ಲರೂ ತಮ್ಮ ತಮ್ಮೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಸಿನಿಮಾಟೋಗ್ರಫರ್‌ ಪ್ರೀತಾ ಮತ್ತು ಸಂಗೀತ ನಿರ್ದೇಶಕ ಅನೂಪ್‌ ಭಂಡಾರಿಯವರ ಕೆಲಸ ಕೂಡಾ ನಿರ್ದೇಶಕಿ ಪ್ರಿಯಾ ಅವರ ಕನಸಿಗೆ ಇಂಬು ನೀಡುವಂತಿದೆ.

 

ಆದಿ ಲಕ್ಷ್ಮಿ ಪುರಾಣ ಒಂದು ಕಂಪ್ಲೀಟ್‌ ಎಂಟರ್‌ಟೇನರ್‌ ಮತ್ತು ನೀಟ್‌ ಸಿನಿಮಾ ಹಾಗಾಗಿ ಈ ವಿಕೇಂಡ್‌ಗೆ ಒಂದೊಳ್ಳೆ ಎಕ್ಸ್‌ಪಿರಿಯನ್ಸ್‌ ಎನ್ನಬಹದು. 

 

Spread the love
Click to comment

Copyright © 2019 PopcornKannada.com