Cinema News

ದೊಡ್ಡಮಟ್ಟದಲ್ಲಿ ಹಿಟ್.. ಕೋಟಿ ಕೋಟಿ ಕಲೆಕ್ಷನ್.. ಮುಂಬೈನಲ್ಲಿ ದಾಖಲೆ ಬರೆಯಲಿದೆ ಜೈ ಸಿನಿಮಾ..!

Published

on

ಆರ್ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾ ಬಿಡುಗಡೆಯಾಗಿ ದಾಖಲೆ ಬರೆಯುತ್ತಿದೆ. ಕನ್ನಡ ಹಾಗೂ ತುಳು ಭಾಷೆಯಲ್ಲಿ ರಿಲೀಸ್ ಆದಂತ ಈ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶದಲ್ಲೂ ಅಬ್ಬರಿಸ್ತಾ ಇದೆ. ಕನ್ನಡ ನೆಲದಲ್ಲೇ ನೋಡುಗರು ಇಲ್ಲ ಎನ್ನುವ ಮಾತು ದೂರಾಗಿದೆ. ಕನ್ನಡ ಸಿನಿಮಾಗಳಿಗೆ ಗ್ಲೋಬಲ್ ಲೆವೆಲ್ ನಲ್ಲೂ ಮನ್ನಣೆ ಸಿಕ್ತಾ ಇದೆ. ಅದಕ್ಕೆ ಜೈ ಕಾರಣವಾಗಿದೆ.

 

ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಆಗ್ತಾ ಇದೆ. ಅಂದ್ರೆ ಕಳೆದ ತಿಂಗಳು ನವೆಂಬರ್ 14ರಂದು ಸಿನಿಮಾ ರಿಲೀಸ್ ಆಗಿತ್ತು. ದಿನಕಳೆದಂತೆ ಸಿನಿಮಾದೊಳಗಿರುವ ಕಂಟೆಂಟ್ ಬಗ್ಗೆ ಜನ ಮಾತನಾಡುವುದಕ್ಕೆ ಶುರುವಾಯ್ತು. ಆಗಿನಿಂದ ಸಿನಿಮಾಗೆ ಡಿಮ್ಯಾಂಡ್ ಕೂಡ ಜಾಸ್ತಿ ಆಯ್ತು. ಈಗಿನ ಸಿನಿಮಾಗಳ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವಂತದ್ದೇ. ಒಂದು ವಾರ ಥಿಯೇಟರ್ ನಲ್ಲಿ ಇದ್ದರೆ ಹೆಚ್ಚು. ಅಂಥದ್ರಲ್ಲಿ ಜೈ ಸಿನಿಮಾ 16 ಥಿಯೇಟರ್ ನಲ್ಲಿ 25 ದಿನವನ್ನು ಪೂರೈಸಿದೆ. ಇದು ಈಚಿನ ದಿನದ ಸಾಧನೆಯೇ ಸರಿ.

 

 

 

 

 

ಜೈ ಸಿನಿಮಾ 2025ರ ಸಕ್ಸಸ್ ಫುಲ್ ಮೂವಿ ಅಂದ್ರೆ ತಪ್ಪಾಗುವುದಿಲ್ಲ. ಇದೇ ಖುಷಿಯಲ್ಲಿ ಸಿನಿಮಾ ತಂಡ 14ನೇ ತಾರೀಖು ಅಂದ್ರೆ ನಾಳೆ ಮುಂಬೈನಲ್ಲಿ 25 ಪ್ರೀಮಿಯರ್ ಶೋ ನಡೆಸಲು ಪ್ಲ್ಯಾನ್ ಹಾಕಿಕೊಂಡಿದೆ. ಇಷ್ಟು ದೊಡ್ಡ ಮಟ್ಟಕ್ಕೆ ತುಳುವಾಗಲಿ, ಕನ್ನಡವಾಗಲಿ ನಡೆದಿರಲಿಲ್ಲ. ಇದೀಗ ಜೈ ಆ ಎರಡು ಭಾಷೆಯ ಸಿನಿಮಾವನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ರೂಪೇಶ್ ಶೆಟ್ಟಿ.

 

 

 

 

 

ಇನ್ನು ಸಿನಿಮಾದ ಹಲವು ರೈಟ್ಸ್ ಗಳು ಈಗಾಗಲೇ ಒಳ್ಳೆ ಬಜೆಟ್ ಗೆ ಸೇಲ್ ಆಗಿದೆ. ಬಲ್ಲ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಜೈ ಸಿನಿಮಾ 5 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಜೈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮನೋಜ್ ಚೇತನ್ ಡಿ ಸೋಜ ಇನ್ನಿತರರು ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಬಣ್ಣಹಚ್ಚಿದ್ದಾರೆ.

Spread the love
Click to comment

Copyright © 2019 PopcornKannada.com