Cinema News

ವಿಕ್ಕಿ ಕೌಶಲ್ ಗಾಗಿ ಹಸೆಮಣೆ ಬಿಟ್ಟು ಬಂದ ವಧು

Published

on

ಬಾಲಿವುಡ್ ನಟ ವಿಕ್ಕಿ ಕೌಶಲ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೆಲವೇ ಕೆಲವು ವರ್ಷಗಳಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ವಿಕ್ಕಿ ಕೌಶಲ್ ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಕೈ ಹಿಡಿದಿದ್ದಾರೆ. ಆದ್ರೆ ವಿಕ್ಕಿ ಗಿರೋ ಹುಡುಗಿಯರ ಅಭಿಮಾನಿ ಬಳಗ ಮಾತ್ರ ಕೊಂಚವು ಕಮ್ಮಿಯಾಗಿಲ್ಲ. ಇದೀಗ ವಧುವೊಬ್ಬರು ವಿಕ್ಕಿ ಕೌಶಲ್ ನೋಡಲು ಹಸೆಮಣೆ ಬಿಟ್ಟು ಕಾಯುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಧು ವಿಕ್ಕಿ ಕೌಶಲ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಆ ಅಭಿಮಾನದಿಂದ ವರನು ಪೇಚಿಗೆ ಸಿಲುಕಿದ್ದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ವಿಕ್ಕಿ ಕೌಶಲ್ ತಂಗಿದ್ದ ಹೋಟೆಲ್ ಈಗ ತನ್ನ ಮದುವೆಯ ಸ್ಥಳ ಎಂದು ತಿಳಿದ ಮದುಮಗಳು ಹಸೆಮಣೆ ಏರಲು ನಿರಾಕರಿಸಿದ್ದಾಳೆ. ಮೊದಲು ನೆಚ್ಚಿನ ನಟ ವಿಕ್ಕಿ ಜೊತೆ ಭೇಟಿ, ಆಮೇಲೆ ಮದುವೆ ಅಂತಾ ಹಸೆಮಣೆ ಬಿಟ್ಟು ವಿಕ್ಕಿ ತಂಗಿದ್ದ ರೂಂ ಬಳಿ ಹೋಗಿದ್ದಾಳೆ. ನಟನ ಭೇಟಿಗಾಗಿ ವಧು ವಿಕ್ಕಿ ತಂಡದ ಜತೆ ಮಾತನಾಡಿದ್ದಾಳೆ.
ಆದರೆ ಮೊದಲೇ ವಿಕ್ಕಿ ಚಿತ್ರೀಕರಣಕ್ಕಾಗಿ ಬೇರೆ ಲೋಕೇಷನ್ಗೆ ಹೋಗಿದ್ದರು. ಹಾಗಾಗಿ ವಧು ವಿಕ್ಕಿ ಅವರನ್ನ ಭೇಟಿ ಮಾಡಲು ಸಾಧ್ಯವಾಗಿಲ್ಲ. ವಿಕ್ಕಿಗಾಗಿ ಕಾದು ಕೂತಿದ್ದ ವಧುಗೆ ಕೊನೆಗೂ ನಿರಾಸೆಯಾಗಿದೆ.

Spread the love

Copyright © 2019 PopcornKannada.com