News

9ನೇ ವಾರದಲ್ಲೂ ಹೌಸ್‌ ಫುಲ್‌ ಆಗುತ್ತಿರುವ ಬೆಲ್‌ಬಾಟಮ್‌

Published

on

ರಿಷಭ್‌ ಶೆಟ್ಟಿನಟನೆಯ ಬೆಲ್‌ ಬಾಟಮ್‌ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ 50 ದಿನಗಳನ್ನು ಪೂರೈಸಿದೆ. ವಿಶೇಷ ಎಂದರೆ ಈಗಲೂ ಜನ ವಾರಾಂತ್ಯದಲ್ಲಿ ಬೆಲ್‌ ಬಾಟಮ್‌ ನೋಡಲು ಚಿತ್ರಮಂದಿರಕ್ಕೆ ಹೋಗುತ್ತಿದ್ದು,ಕಳೆದ ಶನಿವಾರ ಮತ್ತು ಭಾನುವಾರ ಕೂಡಾ ಬೆಂಗಳೂರಿನ ಎಲ್ಲ ಮಾಲ್‌ಗಳಲ್ಲಿಯೂ ಚಿತ್ರ ಹೌಸ್‌ ಫುಲ್‌ ಪ್ರದರ್ಶನ ಕಂಡಿದೆ. ರಿಷಭ್‌ಶೆಟ್ಟಿ,ಹರಿಪ್ರಿಯಾ,ಅಚ್ಯುತ್‌ಕುಮಾರ್‌,ಪ್ರಮೋದ್ ಶೆಟ್ಟಿ ನಟನೆಯ ಥ್ರಿಲ್ಲರ್‌ ಮತ್ತು ಕಾಮಿಡಿ ಕಥೆಯನ್ನು ಹೊಂದಿರುವ ಈ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಷಕರ ಮನಗೆದ್ದಿತ್ತು. ಸಧ್ಯ ಜನರ ಪ್ರತಿಕ್ರಿಯೆ ನೋಡಿದರೆ ಚಿತ್ರ ಯಶಸ್ವಿ ನೂರು ದಿನಗಳ ಪ್ರದರ್ಶನ ಕಾಣುವುದು ಖಚಿತ ಎಂದು ನಿರ್ಮಾಪಕರು ಖುಷಿ ವ್ಯಕ್ತಪಡಿಸುತ್ತಾರೆ. ಈಗಾಗಲೇ ಬೆಲ್‌ಬಾಟಮ್‌-2 ಚಿತ್ರವನ್ನು ಚಿತ್ರತಂಡ ಅನೌನ್ಸ್ ಮಾಡಿದ್ದು, ಅದನ್ನು ರಿಷಭ್‌ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ.

Spread the love
Click to comment

Copyright © 2019 PopcornKannada.com