Connect with us

Cinema News

ಸೆನ್ಸಾರ್ ಮುಗಿಸಿದ ‘ದಾಸರಹಳ್ಳಿ’ : ಶೀಘ್ರವೇ ರಿಲೀಸ್

Published

on

ಧರ್ಮ ಕೀರ್ತಿರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಎಂ. ಆರ್. ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ‘ದಾಸರಹಳ್ಳಿ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ದಾಸರಹಳ್ಳಿ ಸಿನಿಮಾ ಕುಡಿತದ ವಿರುದ್ಧ ಹೋರಾಡುವ ಕಥೆಯನ್ನು ಹೊಂದಿದೆ. ಕುಡಿತದಿಂದ ಅದೆಷ್ಟೋ ಸಂಸಾರಗಳು ಬೀದಿಗೆ ಬಿದ್ದಿವೆ. ಆ ಅನುಭವ ತೀರಾ ಹತ್ತಿರದಿಂದ ಆಗಬೇಕು ಅಂದ್ರೆ ಗ್ರಾಮೀಣ ಭಾಗದಲ್ಲಿ ಓಡಾಡಿಕೊಂಡು ಬರಬೇಕು. ಕುಡಿತಕ್ಕೊಳಗಾದ ಗಂಡ, ಮಗನಿಂದ ಆ ತಾಯಿ ನರಕ ಅನುಭವಿಸುತ್ತಿರುತ್ತಾಳೆ. ಇದು ಗಂಭೀರವಾದಂತ ವಿಚಾರ. ಯುವಕರಿಗೆ ಮನದಟ್ಟಾಗಬೇಕು, ಕುಡಿತವೇ ಜೀವನ ಎಂದು ನಂಬಿರುವವರಿಗೆ ಇದರ ಅರಿವಾಗಬೇಕು. ಆಗ ಮಾತ್ರ ಒಂದಷ್ಟು ಬದಲಾವಣೆ ಸಾಧ್ಯ. ಬದುಕು ಸುಂದರವಾಗಲು ಸಾಧ್ಯ ಎಂಬ ಅದ್ಭುತ ಸಂದೇಶವನ್ನು ಸಿನಿಮಾ ಹೊಂದಿದೆ.

ವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್ ನಡಿ ಪಿ. ಉಮೇಶ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸೆನ್ಸಾರ್ ಪಾಸ್ ಆಗಿದ್ದು, ಯು/ಎ ಸರ್ಟಿಫಿಕೇಟ್ ಕೀಡ ಪಡೆದಿರುವ ಸಿನಿಮಾ ಪ್ರಚಾರ ಕಾರ್ಯ ಶುರು ಮಾಡಿದೆ. ಧರ್ಮ ಕೀರ್ತಿರಾಜ್ ಕೂಡ ಬಿಗ್ ಬಾಸ್ ಜರ್ನಿ ಮುಗಿಸಿ ಬಂದಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಧರ್ಮ ಅವರ ಪಾತ್ರ ಬಹಳ ಮಹತ್ವವಾದದ್ದಾಗಿದೆ.

ಕನ್ನಡದ ಹಿರಿಯ ಕಲಾವಿದರೆಲ್ಲ ಸೇರಿ ಕುಡಿತದ ವಿರುದ್ಧ ಹೋರಾಡುವ ಸ್ಪಷ್ಟ ಸಂದೇಶವನ್ನೊತ್ತು ಸಿನಿಮಾ ಬರುತ್ತಿದೆ. ಈಗಾಗಲೇ ಸೆನ್ಸಾರ್ ಅಂಗಳದಲ್ಲಿ ಇದೊಂದು ಉತ್ತಮ ಸಂದೇಶವಿರುವ ಸಿನಿಮಾ ಎಂಬ ಹೊಗಳಿಕೆಯೊಂದಿಗೆ ಯು/ಎ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದೆ. ಅತಿ ಶೀಘ್ರದಲ್ಲಿಯೇ ಎಲ್ಲಾ ಥಿಯೇಟರ್ ಗಳಲ್ಲೂ ಸಿನಿಮಾ ಬಿಡುಗಡೆ ಕಾಣಲಿದೆ.

ವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್ ನಡಿ ಪಿ ಉಮೇಶ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ದಾಸರಹಳ್ಳಿ’ ಸಿನಿಮಾ ಬೆಂಗಳೂರು ಸುತ್ತಮುತ್ತ ಮತ್ತು ಶಿವಮೊಗ್ಗದ ಸುಂದರ ತಾಣದಲ್ಲಿ ಚಿತ್ರೀಕರಣಗೊಂಡಿದೆ. ತಾರಾಬಳಗದಲ್ಲಿ ಹಿರಿಯ ಕಲಾವಿದರ ದಂಡೇ ಅಡಗಿದೆ. ಧರ್ಮ ಕೀರ್ತಿರಾಜ್, ನೇಹಾ, ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ , ಎಂ ಎಸ್ ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ಪದ್ಮಾವಸಂತಿ, ರೇಖಾ ದಾಸ್, ಸಿತಾರ, ಕವನ, ಮೈಸೂರು ಮಂಜುಳಾ, ಪ್ರೇಮ ಗೌಡ , ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್,ಅರಸಿಕೆರೆ ರಾಜು, ಮತ್ತು 150ಕ್ಕೆ ಹೆಚ್ಚು ಹಿರಿಯ ಕಲಾವಿದರು ಇದ್ದಾರೆ. ಇಷ್ಟು ದೊಡ್ಡ ಬಳಗ ಒಂದೇ ಸಿನಿಮಾದಲ್ಲಿ ಇರುವುದೇ ವಿಶೇಷ. ಇಂಥದ್ದೊಂದು ಸಾಹಸ ಮಾಡಿದ ಕೀರ್ತಿ ನಿರ್ಮಾಪಕ ಉಮೇಶ್ ಅವರಿಗೆ ಸಲ್ಲಬೇಕು. ಉಳಿದಂತೆ ಸಂಗೀತ – ಎಂ. ಎಸ್. ತ್ಯಾಗರಾಜ, ಛಾಯಾಗ್ರಹಣ -ಸಿ ನಾರಾಯಣ್ ಮತ್ತು ಬಾಲು, ಸಂಕಲನ -ಆರ್. ಡಿ. ರವಿ (ದೊರೆರಾಜ್), ಸಾಹಸ – ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ, ಚಿತ್ರಕಥೆ, ಸಂಭಾಷಣೆ – ಶಿವರಾಜ್, ಸಾಯಿ ಕೃಷ್ಣ ಹೆಬ್ಬಾಳ, ತಾಂತ್ರಿಕ ನಿರ್ದೇಶನ – ಶರಣ್ ಗದ್ವಾಲ್, ಸಹ ನಿರ್ದೇಶನ – ಗಹನ್ ನಾಯಕ್ ನಿರ್ವಹಿಸಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *