Cinema News
“ರಾನಿ” 3ನೇ ವಾರಕ್ಕೆ
ಕನ್ನಡ ಸಿನಿಮಾಗಳು ಹೆಚ್ಚು ಓಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ “ರಾನಿ” 3ನೇ ವಾರಕ್ಕೆ ಕಾಲಿಟ್ಟಿದ್ದಾನೆ. ಗಟ್ಟಿ ಕತೆ ಹೊಸತನದ ಚಿತ್ರಕಥೆ ಅದ್ಭುತ ಮೇಕಿಂಗ್ ನಿಂದ “ರಾನಿ” ಸದ್ದು ಮಾಡಿದ್ದಾನೆ, ಪ್ರೇಕ್ಷಕರ ಮನ ಗೆದ್ದಿದ್ದಾನೆ. ಯಶಸ್ವಿಯಾಗಿ 3ನೇ ವಾರಕ್ಕೆ ಪ್ರವೇಶಿಸಿದ್ದಾನೆ. 25 ದಿನ ಪೂರೈಸುವ ಸೂಚನೆಯನ್ನೂ ನೀಡಿದ್ದಾನೆ. ಮುಖ್ಯ ಚಿತ್ರ ಕೆ.ಜಿ ರಸ್ತೆಯ ಅನುಪಮ, ಮಲ್ಟಿಪ್ಲೆಕ್ಸ್ ಹಾಗೂ ರಾಜ್ಯಾದ್ಯಂತ ಬಿ.ಸಿ ಸೆಂಟರ್ ಗಳಲ್ಲಿ 3ನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿದೆ.ಚಿತ್ರ ತಂಡವು ಚಿತ್ರ ಮಂದಿರಗಳಿಗೆ ಬೇಟಿ ನೀಡುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಖುಷಿಯಾಗಿದೆ ಎಂದು “ರಾನಿ” ತಂಡ ತಿಳಿಸಿದೆ.
Continue Reading