News
ದೊಡ್ಡಬಳ್ಳಾಪುರದ ಉಪವಿಭಾಗಧಿಕಾರಿ ಎನ್ ದುರ್ಗಾಶ್ರೀ ಅವರಿಗೆ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ 2024 .
ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸಿದ ಕಂದಾಯ ಅಧಿಕಾರಿಗಳ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರದ ಕಂದಾಯ ಆಯುಕ್ತಾಲಯ ನೀಡಲಾಗುವ “ಅತ್ಯುತ್ತಮ ಕಂದಾಯ ಅಧಿಕಾರಿ 2024” ಪ್ರಶಸ್ತಿಗೆ ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿ ಎನ್ ದುರ್ಗಾಶ್ರೀ ಅವರು ಭಾಜನರಾಗಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರು ಎನ್ ದುರ್ಗಾಶ್ರೀ ಅವರಿಗೆ “ಅತ್ಯುತ್ತಮ ಕಂದಾಯ ಅಧಿಕಾರಿ 2024” ಪ್ರಶಸ್ತಿ ಪ್ರದಾನ ಮಾಡಿದರು.
Continue Reading