Movie Reviews
ರಕ್ತಾಕ್ಷ ಚಿತ್ರ ವಿಮರ್ಶೆ : ರೇಟಿಂಗ್ – 3/5
ರಕ್ತಾಕ್ಷ ಚಿತ್ರದ ಆರಂಭದಲ್ಲಿ ಮೂರು ಯುವತಿಯರ ಕೊಲೆಯಾಗುತ್ತದೆ. ಆ ಕೊಲೆಗಳ ಜಾಡು ಹಿಡಿದು ಹೋಗುವ ಪೊಲೀಸರಿಗೆ ಕೊನೆಗೆ ಸಿಗುವ ಉತ್ತರ ಎಲ್ಲರನ್ನು ಬೆಚ್ಚಿಬೀಳಿಸುವಂತದ್ದು.
ನಿರ್ದೇಶಕರು ಒಂದು ಕ್ರೈಮ್ ಕತೆಯನ್ನು ಸಸ್ಪೆನ್ಸ್ & ಥ್ರಿಲ್ಲರ್ ರೀತಿಯ ನಿರೂಪಣೆಯೊಂದಿಗೆ ಕುತೂಹಲಭರಿತವಾಗಿ ಹೇಳುವ ಜತೆಗೆ ಅದಕ್ಕೊಂದು ಪ್ರತೀಕಾರದ ಆಯಾಮವನ್ನು ನೀಡಿದ್ದಾರೆ.
ಮಾಡೆಲಿಂಗ್ ಹಿನ್ನಲೆಯಿಂದ ಬಂದಿರುವ ರೋಹಿತ್ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸುವುದರ ಜೊತೆಗೆ ಆಕ್ಷನ್‌ನಲ್ಲಿ ಮಿಂಚಿದ್ದಾರೆ. ನಾಯಕಿಯರುಗಳಾದ ರಚನಾದಶರಥ, ಅರ್ಚನಾಕೊಟ್ಟಿಗೆ, ರೂಪರಾಯಪ್ಪ ಮತ್ತು ನಿವೀಕ್ಷನಾಯ್ಡು ಅವರು ಸಿಕ್ಕ ಅವಕಾಶದಲ್ಲೇ ಸ್ಕೋರ್ ಮಾಡಿದ್ದಾರೆ. ಪ್ರಮೋದ್‌ಶೆಟ್ಟಿ ಕೆಲವೇ ದೃಶ್ಯಗಳಲ್ಲಿ ಕಾಣಿಸ್ಕೊಂಡರೂ ಗಮನ ಸೆಳೆಯುತ್ತಾರೆ. ಡಾಸ್‌ಮೋಡ್ ಸಂಗೀತ & ಆದರ್ಶ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರದ ಮೊದಲರ್ಧದಲ್ಲಿ ಪ್ರೇಕ್ಷಕರಿಗೆ ಕೆಲವೊಂದು ದೃಶ್ಯಗಳಲ್ಲಿ ರಕ್ತಪಾತ ಹೆಚ್ಚೆಯಿದೆ ಎಂದೆನಿಸಿದರೆ, ದ್ವಿತೀಯಾರ್ಧದಲ್ಲಿ ಅದಕ್ಕೆ ಕಾರಣ ಕೊಡಲು ನಿರ್ದೇಶಕರು ತಕ್ಕಮಟ್ಟಿಗೆ ಶಕ್ತರಾಗಿದ್ದಾರೆ ಎನ್ನಬಹುದು.
ರಿವೇಂಜ್ ಸ್ಟೋರಿಯಾದರೂ ನಿರ್ದೇಶಕರು ಕುತೂಹಲಕಾರಿಯಾಗಿ ನಿರೂಪಿಸಲು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದಾರೆ. ಡ್ರಗ್ಸ್, ಕಳ್ಳಸಾಗಣೆ ಎಂಬ ಗಂಭೀರ ವಿಷಯಗಳು ಚಿತ್ರದಲ್ಲಿವೆ.
ಆಕ್ಷ್ಯನ್ ಕ್ರೈಮ್ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕರು ಈ ಚಿತ್ರವನ್ನು ಒಮ್ಮೆ ನೋಡಬಹುದು.