Connect with us

Movie Reviews

ಹೈಡ್ ಆ್ಯಂಡ್ ಸೀಕ್ Review

Published

on

ಸಿನಿಮಾ: ಹೈಡ್ ಆ್ಯಂಡ್ ಸೀಕ್.
ನಿರ್ದೇಶನ: ಪುನೀತ್ ನಾಗರಾಜು.
ಪಾತ್ರವರ್ಗ: ಅನೂಪ್ ರೇವಣ್ಣ, ಧನ್ಯಾ ರಾಮ್ಕುಮಾರ್, ರಾಜೇಶ್ ನಟರಂಗ, ಕೃಷ್ಣ ಹೆಬ್ಬಾಳೆ, ಅರವಿಂದ್ ರಾವ್, ಮುಂತಾದವರು.
ನಿರ್ಮಾಣ: ವಸಂತ್ ರಾವ್ ಎಂ. ಕುಲಕರ್ಣಿ, ಪುನೀತ್ ನಾಗರಾಜು.

‘ಹೈಡ್ ಆ್ಯಂಡ್ ಸೀಕ್’ ಸಿನಿಮಾದಲ್ಲಿ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಿದೆ. ಪುನೀತ್ ನಾಗರಾಜು ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅನೂಪ್ ರೇವಣ್ಣ ಅವರು ನಾಯಕನಾಗಿ ಹಾಗು ಧನ್ಯಾ ರಾಮ್ಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಚಿತ್ರದಕಥೆ ಬಹಳ ಸರಳ. ಒಬ್ಬ ಕಿಡ್ನ್ಯಾಪರ್‌ ತನ್ನ ಮೇಲಿನ ಬಾಸ್‌ ಕೊಡುವ ಸಂದೇಶದಂತೆ ತನ್ನ ಸಹಚರರ ಜೊತೆ ಶ್ರೀಮಂತ ಕುಟುಂಬದ ಹಿನ್ನೆಲೆಯ ಹುಡುಗಿಯರಿಬ್ಬರನ್ನು ಅಪಹರಿಸುತ್ತಾನೆ. ಮೇಲ್ನೋಟಕ್ಕೆ ಇದೊಂದು ಅಪಹರಣ ಎಂದು ಕಾಣಿಸಿದರೂ, ಅಪಹರಣವಾದ ನಂತರ ನಿಧಾನವಾಗಿ ಅದರ ಹಿಂದಿನ ಉದ್ದೇಶ, ಅದಕ್ಕೆ ಕಾರಣವಾದ ಕಾಣದ ಕೈಗಳು, ಅದರ ಹಿಂದಿನ ನಿಗೂಢ ಜಾಲ ಹೀಗೆ ಒಂದೊಂದೇ ಎಳೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಚಿತ್ರದ ದ್ವಿತೀಯಾರ್ದಲ್ಲಿ ತುಂಬಾ ಟ್ವಿಸ್ಟ್ಸ್ ಗಳು ಬರತ್ತವೆ.

ಅನೂಪ್ ರೇವಣ್ಣ ಅವರ ಪಾತ್ರಕ್ಕೆ ಹೆಚ್ಚಿನ ಹಾವಭಾವಗಳನ್ನು ಅಭಿವ್ಯಕ್ತಿಸುವ ಅವಕಾಶ ಸಿಕ್ಕಿಲ್ಲ. ಆ ಪಾತ್ರಕ್ಕೆ ಸಂಭಾಷಣೆ ಕೂಡ ಕಮ್ಮಿ. ಅವರ ರಗ್ಗಡ್ ಲುಕ್ ಮಾಸ್ ಪ್ರೇಕ್ಷಕರಿಗೆ ಅವರನ್ನು ಹತ್ತಿರ ಮಾಡಲು ಸಹಕರಿಸಿದೆ. ನಾಯಕಿ ಧನ್ಯಾ ರಾಮಕುಮಾರ್‌ ನಟನೆಗೆ ಹೆಚ್ಚು ಅವಕಾಶವಿಲ್ಲದ ಪಾತ್ರವಿರುವ ಕಾರಣ ಹೆಚ್ಚೇನೂ ಸ್ಕೋರ್ ಮಾಡಲ್ಲ. ಉಳಿದಂತೆ ಕೃಷ್ಣ ಹೆಬ್ಟಾಳೆ, ರಾಜೇಶ್‌ ನಟರಂಗ, ಬಲರಾಜವಾಡಿ, ಅರವಿಂದ ರಾವ್‌, ಮೈತ್ರಿ ಜಗ್ಗಿ ಮತ್ತಿತರರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕ್ಯಾಮರಾವರ್ಕ್ ಮತ್ತು ಮ್ಯೂಸಿಕ್ ಚಿತ್ರಕ್ಕೆ ಪೂರಕವಾಗಿದೆ.

ಈ ಅಪಹರಣದ ಕಥೆಯಲ್ಲಿ ಗಂಭೀರತೆ ಕೊರತೆ ಇದೆ. ಕಾಮಿಡಿ ದೃಶ್ಯಗಳು ಈ ಚಿತ್ರದಲ್ಲಿ ಅಲ್ಲಲ್ಲಿ ನಗಿಸಿದರೂ ಚಿತ್ರಕ್ಕೆ ಹೆಚ್ಚೇನೂ ಲಾಭ ಮಾಡಲ್ಲ. ಬರೀ ಎಂಟರ್ಟೈನ್ಮೆಂಟ್ ಅಲ್ಲದೆ ಸಸ್ಪೆನ್ಸ್ ಮತ್ತು ಟ್ವಿಸ್ಟ್ಗಳನ್ನು ಇಷ್ಟ ಪಡೋರಿಗೆ ‘ಹೈಡ್ ಆ್ಯಂಡ್ ಸೀಕ್’ ಸಿನಿಮಾ ಇಷ್ಟ ಆಗುತ್ತದೆ.

Rating – 3/5.

Spread the love

Continue Reading
Click to comment

Leave a Reply

Your email address will not be published. Required fields are marked *