Movie Reviews
“ಪ್ರಣಯಂ” ಚಿತ್ರವಿಮರ್ಶೆ
“ಪ್ರಣಯಂ” ಚಿತ್ರವಿಮರ್ಶೆ
ನಿರ್ದೇಶನ: ಎಸ್. ದತ್ತಾತ್ರೇಯ
ತಾರಾಗಣ: ರಾಜವರ್ಧನ್, ನೈನಾ ಗಂಗೂಲಿ, ಪವನ್ ಸೂರ್ಯ, ರಾಘವ ನಾಯಕ್
ಚಿಕ್ಕಮಗಳೂರಿನ ನವದಂಪತಿಗಳ ಮೇಲೆ ಕೇಂದ್ರಿತವಾಗಿರುವ ಚಿತ್ರವೇ “ಪ್ರಣಯಂ”. ನಿಶ್ಚಿತಾರ್ಥ ಮತ್ತು ಮದುವೆ ನಡುವಿನ ಸಮಯದಲ್ಲಿ ನಡೆಯುವ ಘಟನೆಗಳನ್ನು ನಿರ್ದೇಶಕರು ಹೆಚ್ಚಾಗಿ ಬಳಸಿಕೊಂಡು ಒಂದು ಥ್ರಿಲಿಂಗ್ ಅನುಭವ ನೀಡಲು ಪ್ರಯತ್ನಿಸಿದ್ದಾರೆ.
ಬಿಚ್ಚುಗತ್ತಿ ನಂತರ ರಾಜವರ್ಧನ್ ಈ ಚಿತ್ರದಲ್ಲಿ ಲವರ್ ಬಾಯ್ ಆಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅವರಿಗೆ ಸಾಥ್ ನೀಡಿರೋದು ನೈನಾ ಗಂಗೂಲಿ. ಇವರಿಬ್ಬರ ಕೆಮಿಷ್ಟ್ರಿ ಚಿತ್ರದಲ್ಲಿ ಚೆನ್ನಾಗಿ ವರ್ಕ್ ಆಗಿದೆ.
ಚಿತ್ರದ ಮೊದಲಾರ್ಧ ತುಂಟತನ, ಲವಲವಿಕೆಯಿಂದ ಕೂಡಿದ್ದು ಇಂಟರ್ವಲ್ ಸಮಯಕ್ಕೆ ಕೊಂಚ ಗಂಭೀರತೆ ಪಡೆದುಕೊಳ್ಳುತ್ತದೆ. ದ್ವಿತೀಯಾರ್ಧದಲ್ಲಿ ನಿರ್ದೇಶಕರು ಹೊಸದೊಂದು ಎಳೆಯೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ. ಚಿತ್ರಕಥೆಯಲ್ಲಿ ಮತ್ತಷ್ಟು ಗಟ್ಟಿತನವಿರಬೇಕಿತ್ತು. ಚಿತ್ರದ ಕೊನೆಗೂ ಚಿತ್ರಕ್ಕೆ ಸಂಪೂರ್ಣತೆ ಸಿಗದಿರುವುದು ಪ್ರೇಕ್ಷಕರಿಗೆ ಇನ್ನೇನೊ ಬೇಕಿತ್ತು ಅನಿಸುತ್ತದೆ.
ಚಿತ್ರದಲ್ಲಿ ಬರುವ ಒಂದೆರಡು ಹಾಡುಗಳು ಮತ್ತು ಹೊಡೆದಾಟದ ಸನ್ನಿವೇಶಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಚಿತ್ರದಲ್ಲಿ ಬರುವ ಪೋಷಕ ಪಾತ್ರಗಳ ಅಭಿನಯ ಗಮನ ಸೆಳೆಯುತ್ತವೆ.
ಯುವಕ ಯುವತಿಯರಿಗೆ ಇಷ್ಟವಾಗುವ ಬಹಳಷ್ಟು ಸನ್ನಿವೇಶಗಳು ಚಿತ್ರದಲ್ಲಿದ್ದು, ಈ ಚಿತ್ರವು ಆ ವರ್ಗದ ಅಡಿಯನ್ಸ್‌ಗೆ ಇಷ್ಟವಾಗಬಹುದು.